ನವದೆಹಲಿ: ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆಲವು ವಲಯಗಳಿಗೆ ಸಾಲ ಮರುಪಾವತಿ ಅವಧಿ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ.
ಆಟೋಮೊಬೈಲ್, ವಿಮಾನಯಾನ, ಅತಿಥಿ ಉದ್ಯಮ ವಲಯದ ಕಂಪನಿಗಳಿಗೆ ಸಾಲ ಮರುಪಾವತಿ ಮುಂದೂಡಿಕೆಯ ಅವಧಿ ವಿಸ್ತರಣೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಆಗಸ್ಟ್ 31 ಕ್ಕೆ ಸಾಲ ಮರುಪಾವತಿ ಅವಧಿ ಮುಂದೂಡಲಾಗಿದ್ದು ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಿಸದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಅವಧಿಯನ್ನು ಮತ್ತೆ ವಿಸ್ತರಿಸಲು ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಪರಿಶೀಲನೆ ನಡೆಸಿದೆ. ಲಾಕ್ ಡೌನ್ ನಿಂದ ಹಲವು ವಲಯ ತತ್ತರಿಸಿದ್ದು ನಗದು ಹರಿವು ವಹಿವಾಟು ಸ್ಥಿತಿಗತಿ ಸುಧಾರಿಸದ ಹಿನ್ನೆಲೆಯಲ್ಲಿ ಸಾಲ ಮರುಪಾವತಿಗೆ ಮತ್ತಷ್ಟು ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.