ಮುಂಬೈ: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಸಾಲದ ಚಕ್ರ ಬಡ್ಡಿ ಮನ್ನಾ ಮಾಡುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರ ಮೊರಾಟೋರಿಯಂ ಅವಧಿಯಲ್ಲಿನ ಚಕ್ರಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದು ಅಂತೆಯೇ ಆರ್.ಬಿ.ಐ.ನಿಂದ ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 5 ರೊಳಗೆ ಚಕ್ರಬಡ್ಡಿ ಮನ್ನಾ ಮಾಡುವಂತೆ ಬ್ಯಾಂಕುಗಳಿಗೆ ಆರ್ಬಿಐ ಸೂಚನೆ ನೀಡಿದೆ.
ಗೃಹ ಸಾಲ, ಶೈಕ್ಷಣಿಕ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲ ಮೊದಲಾದ 2 ಕೋಟಿ ರೂಪಾಯಿ ವರೆಗಿನ ಸಾಲಗಳಿಗೆ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಸಾಲಗಾರರ ಖಾತೆಗಳಲ್ಲಿ ಚಕ್ರಬಡ್ಡಿ ಮನ್ನಾ ಮೊತ್ತ ಜಮಾ ಮಾಡುವ ಮೂಲಕ ನವೆಂಬರ್ 5 ರೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಹಣಕಾಸು ಸಚಿವಾಲಯದ ಮಾರ್ಗಸೂಚಿ ಅನ್ವಯ ಆರ್ಬಿಐ ಅಧಿಸೂಚನೆ ಹೊರಡಿಸಿದ್ದು, ಎರಡು ಕೋಟಿ ರೂಪಾಯಿ ಸಾಲದ ಚಕ್ರಬಡ್ಡಿ ಮನ್ನಾ ಮಾಡಲು ತಿಳಿಸಲಾಗಿದೆ. ಅಂತೆಯೇ ಮೊರಾಟೋರಿಯಂ ಅವಧಿಯಲ್ಲಿ ಇಎಂಐ ಪಾವತಿಸಿದವರಿಗೆ ಚಕ್ರಬಡ್ಡಿಯ ಕ್ಯಾಶ್ ಬ್ಯಾಕ್ ಸಿಗಲಿದೆ.