
ಮುಂಬೈ: ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಆದಾಯ ವೃದ್ಧಿಗೆ ದಂಡ ಬಡ್ಡಿ ಹೇರಿಕೆಯನ್ನು ಸಾಧನವಾಗಿ ಮಾಡಿಕೊಂಡಿರುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಕಳವಳ ವ್ಯಕ್ತಪಡಿಸಿದ್ದು, ದಂಡ ಬಡ್ಡಿಯನ್ನು ನಿಷೇಧಿಸಿದೆ.
ಸಾಲ ಮರುಪಾವತಿಗೆ ವಿಫಲವಾದರೆ ದಂಡ ಬಡ್ಡಿಗೆ ಬದಲಾಗಿ ತರ್ಕಬದ್ಧವಾದ ದಂಡ ಶುಲ್ಕ ಮಾತ್ರ ಹೇರಬಹುದು ಎಂದು ಹೇಳಿದೆ. ದಂಡ ಬಡ್ಡಿ ಹೇರಿಕೆ ಮೇಲಿನ ನಿಷೇಧ 2024ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಆರ್‌ಬಿಐ ತಿಳಿಸಿದೆ. ಸಾಲ ಮಂಜೂರಾತಿ ವೇಳೆ ಮರುಪಾವತಿ ಸಾಮರ್ಥ್ಯ ಪರಿಗಣಿಸಬೇಕು. ಸಾಲದ ಒಪ್ಪಂದ ಉಲ್ಲಂಘನೆಗೆ ದಂಡ ಶುಲ್ಕ ಮಾತ್ರ ವಿಧಿಸಬೇಕು ಎಂದು ಹೇಳಲಾಗಿದೆ.