ನವದೆಹಲಿ: ಲಾಕ್ ಡೌನ್ ಸಂದರ್ಭದಲ್ಲಿ ಸಾಲದ ಕಂತು ಪಾವತಿಗೆ ವಿನಾಯಿತಿ ಪಡೆದವರಿಗೆ ಚಕ್ರಬಡ್ಡಿ ಮನ್ನಾ ಮಾಡಲಾಗಿದೆ.
ಮೊರಾಟೋರಿಯಂ ಅವಧಿಯಲ್ಲಿ ಚಕ್ರ ಬಡ್ಡಿ ಮನ್ನಾ ಮಾಡಲು ಫೆಬ್ರವರಿ 29 ಕ್ಕೆ ಇದ್ದ ಸಾಲದ ಬಾಕಿ ಮೊತ್ತ ಮಾನದಂಡವಾಗಿರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಫೆಬ್ರವರಿ 29 ಕ್ಕೆ ಕೊನೆಯಾಗದಂತೆ ಇಎಂಐ ಪಾವತಿ ತಪ್ಪಿಸದ ಸುಸ್ತಿಯಾಗದ ಎರಡು ಕೋಟಿ ರೂಪಾಯಿಗಳ ಸಾಲದ ಬಾಕಿಗೆ ಚಕ್ರಬಡ್ಡಿ ಹಾಕುವುದಿಲ್ಲ. ಆದರೆ ಮಾರ್ಚ್ ನಿಂದ ಆಗಸ್ಟ್ ವರೆಗಿನ ಬಡ್ಡಿ ಸಾಲದ ಅಸಲಿಗೆ ಸೇರುತ್ತದೆ. ಇದರೊಂದಿಗೆ ಇಎಂಐ ಪರಿಷ್ಕೃತವಾಗುತ್ತದೆ.
ಇಎಂಐ ಪಾವತಿಸಿದವರಿಗೆ ಚಕ್ರಬಡ್ಡಿ ಮನ್ನಾದ ಪರಿಹಾರ ನವೆಂಬರ್ 5 ರೊಳಗೆ ಸಾಲಗಾರರ ಖಾತೆಗೆ ಜಮಾ ಆಗಲಿದೆ. ಸುಪ್ರೀಂಕೋರ್ಟ್ ಸೂಚನೆಯ ಅನ್ವಯ ಲಾಕ್ಡೌನ್ ಸಂದರ್ಭದಲ್ಲಿ ಇಎಂಐ ಪಾವತಿ ಮಾಡದವರ ಚಕ್ರಬಡ್ಡಿ ಮನ್ನಾ ಮಾಡಲಾಗುತ್ತದೆ.
ಗೃಹ, ವಾಹನ, ಶೈಕ್ಷಣಿಕ, ವೃತ್ತಿಪರ ವೈಯಕ್ತಿಕ ಸಾಲ, ಕಿರು, ಸಣ್ಣ, ಮಧ್ಯಮ ಗಾತ್ರದ ಉದ್ದಿಮೆಗೆ ಪಡೆದ ಸಾಲಗಳು ಸೇರಿದಂತೆ ಎರಡು ಕೋಟಿ ರೂಪಾಯಿ ವರೆಗಿನ ಸಾಲಗಳಿಗೆ ಇದು ಅನ್ವಯವಾಗುತ್ತದೆ. ನಿಯಮಿತವಾಗಿ ಇಎಂಐ ಪಾವತಿಸಿದವರಿಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಆದರೆ ಚಕ್ರ ಬಡ್ಡಿ ಮನ್ನಾ ಮಾಡಲು ಫೆಬ್ರವರಿ 29 ಸಾಲದ ಬಾಕಿ ಮೊತ್ತ ಮಾನದಂಡವಾಗಿ ಇರುತ್ತದೆ ಎಂದು ಹೇಳಲಾಗಿದೆ.