
ಬೆಂಗಳೂರು: ರೈತರು ಮತ್ತು ಸ್ವಸಹಾಯ ಸಂಘದ ಸಾಲದ ಮರುಪಾವತಿಯನ್ನು ಮೂರು ತಿಂಗಳು ವಿಸ್ತರಣೆ ಮಾಡಲಾಗಿದೆ.
ಇದರಿಂದ ರಾಜ್ಯದ 4.25 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ಈ ಅವಧಿಯ ಮೂರು ತಿಂಗಳ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ರೈತರು ಮತ್ತು ಸ್ವಸಹಾಯ ಸಂಘಗಳವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಪಡೆದಿರುವ ಎಲ್ಲಾ ರೀತಿಯ ಸಾಲ ಮರುಪಾವತಿ ವಿಸ್ತರಣೆ ಮಾಡಲಾಗಿದೆ. ಮೇ ತಿಂಗಳಿನಿಂದ ಪಾವತಿಸಬೇಕಾಗಿರುವ ಕಂತುಗಳನ್ನು ಜುಲೈವರೆಗೆ ವಿಸ್ತರಿಸಲಾಗಿದೆ.