
ಬೆಂಗಳೂರು: ಸಾಲ ಮನ್ನಾ ಗೊಂದಲ ಇತ್ಯರ್ಥಪಡಿಸುವಂತೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದ್ದಾರೆ.
ವಿಧಾನಸೌಧದ ತಮ್ಮ ಕೊಠಡಿಗೆ ಸಚಿವರನ್ನು ಕರೆಸಿಕೊಂಡ ಸ್ಪೀಕರ್, ತಾಂತ್ರಿಕ ಕಾರಣಗಳಿಂದ ಅನೇಕ ರೈತರ ಸಾಲ ಮನ್ನಾ ತಡೆಯಲಾಗಿದೆ. ಅರ್ಹರಿಗೆ ಕೂಡ ಅನ್ಯಾಯವಾಗಿದ್ದು ಇದನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪಡಿತರ ಚೀಟಿ, ಆಧಾರ್ ಕಾರ್ಡ್ ಹೊಂದಾಣಿಕೆ ಆಗದಿರುವುದು ಸೇರಿ ಮೊದಲಾದ ಸಮಸ್ಯೆಯಿಂದ ಅನೇಕ ಅರ್ಹ ರೈತರು ಸಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದಕ್ಕೆ ಪರಿಹಾರ ಕಂಡು ಹಿಡಿಯಲು ಸ್ಪೀಕರ್ ಸೂಚಿಸಿದ್ದು ಸಚಿವರು ತಕ್ಷಣವೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.