ಬೆಂಗಳೂರು: ಸಾಲ ಪಾವತಿಸದ ರೈತರ ಆಸ್ತಿ ಜಪ್ತಿ ತಡೆಯಲು ರಾಜ್ಯದಲ್ಲಿ ಶೀಘ್ರವೇ ಕಾನೂನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು ಕೃಷಿ ವಿವಿಯಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಏರ್ಪಡಿಸಿದ್ದ ಕೃಷಿ ಮೇಳದಲ್ಲಿ ಸಾಧಕ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಿಎಂ, ಸಾಲ ಕಟ್ಟದ ರೈತರ ಆಸ್ತಿ ಜಪ್ತಿ ಮಾಡದಂತೆ ಸಹಕಾರ ಸಂಘಗಳು, ಬ್ಯಾಂಕುಗಳಿಗೆ ನಿರ್ಬಂಧ ವಿಧಿಸಲಾಗುವುದು ಎಂದರು.
ಸಾಲ ಪಡೆದ ರೈತರು ಕೆಲವೊಮ್ಮೆ ಕಟ್ಟಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ರೈತರ ಆಸ್ತಿ ಜಪ್ತಿ ಮಾಡಲು ಬ್ಯಾಂಕುಗಳು ಮುಂದಾಗುತ್ತವೆ. ಇದಕ್ಕೆ ಕಡಿವಾಣ ಹಾಕಲಾಗುವುದು. ಸಹಕಾರ ಸಂಘಗಳು, ಬ್ಯಾಂಕುಗಳಿಗೆ ರೈತರು ಸಾಲ ಪಾವತಿಸದಿದ್ರೆ ಆಸ್ತಿ ಜಪ್ತಿ ಮಾಡುವಂತಿಲ್ಲ. ಸಾಲ ಮರುಪಾವತಿ ಆಗದಿದ್ದರೆ ಆಸ್ತಿ ಜಪ್ತಿ ಮಾಡದೆ ಸಾಲ ಕಟ್ಟಲು ರೈತರಿಗೆ ಸಮಯ ನೀಡಬೇಕು. ಈ ಬಗ್ಗೆ ರಾಜ್ಯದಲ್ಲಿ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.