ಬೆಂಗಳೂರು: ಸಹಕಾರ ಬ್ಯಾಂಕ್ ಗಳನ್ನು ಜನಸ್ನೇಹಿಯಾಗಿಸಲು ಸಿಎಂ ಸೂಚನೆ ನೀಡಿದ್ದು ಈ ಪ್ರಕಾರ ಶೀಘ್ರವೇ ಸಾಲ ಮೇಳ ಆಯೋಜಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
2019 -20 ನೇ ಸಾಲಿನಲ್ಲಿ 22.52 ಲಕ್ಷ ರೈತರಿಗೆ 13,577 ಕೋಟಿ ರೂಪಾಯಿ ಬೆಳೆ ಸಾಲ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 24.50 ಲಕ್ಷ ರೈತರಿಗೆ 14,500 ಕೋಟಿ ರೂಪಾಯಿ ಸಾಲ ವಿತರಣೆ ಗುರಿ ಹೊಂದಿದ್ದು ಆಗಸ್ಟ್ 24 ರವರೆಗೆ 10,57,825 ರೈತರಿಗೆ 7038.91 ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ.
ಇನ್ನು ಸಹಕಾರ ಬ್ಯಾಂಕುಗಳನ್ನು ಜನಸ್ನೇಹಿಯಾಗಿ ಸಲಿಗ್ರಮ ಮೇಳ ಆಯೋಜಿಸಲಾಗುವುದು. ಹೈನುಗಾರಿಕೆ ಮತ್ತು ಮೀನುಗಾರಿಕೆ ತೊಡಗಿರುವ 13,266 ರೈತರಿಗೆ 22 ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.