alex Certify ವಾಹನ ಸವಾರರಿಗೆ ಗುಡ್ ನ್ಯೂಸ್: DL, RC ಸೇರಿ ಸಾರಿಗೆ ಸೇವೆ ಆನ್ಲೈನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರಿಗೆ ಗುಡ್ ನ್ಯೂಸ್: DL, RC ಸೇರಿ ಸಾರಿಗೆ ಸೇವೆ ಆನ್ಲೈನ್

ಬೆಂಗಳೂರು: ಕಲಿಕಾ ಚಾಲನಾ ಪರವಾನಿಗೆ(LLR), ವಾಹನ ನೋಂದಣಿ, ವಾಹನಗಳ ಮಾಲೀಕತ್ವ ವರ್ಗಾವಣೆ ಸೇರಿದಂತೆ ಸಾರಿಗೆ ಇಲಾಖೆ ಬಹುತೇಕ ಸೇವೆಗಳು ನವೆಂಬರ್ 1 ರಿಂದ ಆನ್ಲೈನ್ ನಲ್ಲಿ ಸಿಗಲಿವೆ.

ಆಡಳಿತ ಸುಧಾರಣಾ ಆಯೋಗ 2ರ ಶಿಫಾರಸು ಮತ್ತು ಕೇಂದ್ರ ಸರ್ಕಾರದ ನಿರ್ದೇಶನ ಹಾಗೂ ನಿಯಮದ ಅನುಸಾರ 30 ಪ್ರಮುಖ ಸೇವೆಗಳನ್ನು ಆನ್ಲೈನ್ ನಲ್ಲಿ ಒದಗಿಸಲು ಸಾರಿಗೆ ಇಲಾಖೆಯಿಂದ ಸಿದ್ಧತೆ ಕೈಗೊಂಡಿದ್ದು, ನವೆಂಬರ್ 1 ರಿಂದ ಪ್ರಮುಖ ಸೇವೆಗಳು ಆನ್ಲೈನ್ ನಲ್ಲಿ ಲಭ್ಯವಿರುತ್ತವೆ.

ವಾಹನ್ -4 ರಲ್ಲಿ ವಾಹನ ನೋಂದಣಿ, ತಾತ್ಕಾಲಿಕ ನೋಂದಣಿ, ಮಾಲೀಕತ್ವ ವರ್ಗಾವಣೆ, ಪರ್ಮಿಟ್ ರದ್ದತಿ, ಆರ್.ಸಿ. ನಕಲು ಪ್ರತಿ, ಆಟೋ ರಿಕ್ಷಾ ಪರ್ಮಿಟ್ ನವೀಕರಣ, ವಿಳಾಸ ಬದಲಾವಣೆ, ಸಾರಥಿ -4 ರಲ್ಲಿ ಆನ್ಲೈನ್ ನಲ್ಲಿ ಕಲಿಕಾ ಪರವಾನಿಗೆ, ಕಂಡಕ್ಟರ್ ಪರವಾನಿಗೆ, ಇಂಟರ್ನ್ಯಾಷನಲ್ ಡ್ರೈವಿಂಗ್ ಪರ್ಮಿಟ್, ಡಿ.ಎಲ್. ಎಕ್ಸ್ಟ್ರಾಕ್ಟ್, ಹೆಸರು ವಿಳಾಸ ಬದಲಾವಣೆ ಸೇವೆ ಇರಲಿವೆ.

ಸಾರಿಗೆ ಇಲಾಖೆ ಸೇವೆಯನ್ನು ಸುಲಭ, ಸರಳ, ಭ್ರಷ್ಟಾಚಾರ ಮುಕ್ತವಾಗಿ ಜನರಿಗೆ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...