ಬೆಂಗಳೂರು: ಕರ್ನಾಟಕ ಪಾನೀಯ ನಿಗಮದ ಸರ್ವರ್ ಸ್ಲೋ ಆದ ಕಾರಣ ಮದ್ಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ವ್ಯಾಪಾರಿಗಳು ಪರದಾಡುವಂತಾಗಿದೆ. ಇದರಿಂದಾಗಿ ಮಾರಾಟ ಮಳಿಗೆಗಳಲ್ಲಿ ಮದ್ಯ ಖಾಲಿಯಾಗಿದೆ.
ವೆಬ್ ಇಂಡೆಂಟ್ ಮೂಲಕ ಮಾತ್ರ ಮದ್ಯ ಖರೀದಿಸುವ ವ್ಯವಸ್ಥೆಗೆ ಕರ್ನಾಟಕ ಪಾನೀಯ ನಿಗಮ ಪೋರ್ಟಲ್ ಅಭಿವೃದ್ಧಿಪಡಿಸಿದ್ದು, ಕಳೆದ ನಾಲ್ಕು ದಿನಗಳಿಂದ ಈ ಪೋರ್ಟಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಮದ್ಯ ಖರೀದಿಸಲು ಸಾಧ್ಯವಾಗದೇ ವ್ಯಾಪಾರಿಗಳು ಪರದಾಡುವಂತಾಗಿದೆ. ಪರಿಣಾಮ ಮಾರಾಟ ಮಳಿಗೆಗಳಲ್ಲಿ ಮದ್ಯ ಖಾಲಿಯಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಕರ್ನಾಟಕ ಪಾನೀಯ ನಿಗಮದ ಡಿಪೋಗಳಿಗೆ ಸನ್ನದುದಾರರು ಮದ್ಯದ ಬೇಡಿಕೆ ಪಟ್ಟಿಯೊಂದಿಗೆ ಹೋಗಿ ಹಣ ಪಾವತಿಸಿ ಮದ್ಯ ಖರೀದಿಸುವ ವ್ಯವಸ್ಥೆ ಜಾರಿಯಲ್ಲಿತ್ತು. ಇತ್ತೀಚೆಗೆ ವೆಬ್ ಇಂಡೆಂಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ತಂತ್ರಾಂಶದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಮದ್ಯ ಖರೀದಿಸಲು ಸಾಧ್ಯವಾಗದೆ ಮಳಿಗೆಗಳಲ್ಲಿ ಮದ್ಯ ಖಾಲಿಯಾಗತೊಡಗಿದೆ ಎನ್ನಲಾಗಿದೆ.