ಆಡಿಯೋ ಚಾಟಿಂಗ್ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ. ಬಳಕೆದಾರರು ಈಗ ಚಾಟಿಂಗ್ ಮತ್ತು ಫೋಟೋಗಳಿಗಿಂತ ಹೆಚ್ಚು ಆಡಿಯೊ ಚಾಟಿಂಗ್ ಇಷ್ಟಪಡುತ್ತಿದ್ದಾರೆ. ಕ್ಲಬ್‌ಹೌಸ್ ಯಶಸ್ವಿಯಾಗ್ತಿದ್ದಂತೆ ಲಿಂಕ್ಡ್ ಇನ್ ಈ ವೈಶಿಷ್ಟ್ಯವನ್ನು ಪರಿಚಯಿಸಲು ನಿರ್ಧರಿಸಿದೆ. ಲಿಂಕ್ಡ್ ಇನ್ ನ ಆಡಿಯೋ ಚಾಟಿಂಗ್ ವೈಶಿಷ್ಟ್ಯ ಉದ್ಯೋಗ ಪಡೆಯಲು ಹೆಚ್ಚು ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಿದೆ.
ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ ಇನ್ 200 ಕ್ಕೂ ಹೆಚ್ಚು ದೇಶಗಳಲ್ಲಿ 74 ದಶಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಸದಸ್ಯರಿಗಾಗಿ ಆಡಿಯೊ ನೆಟ್‌ವರ್ಕಿಂಗ್ ಸೌಲಭ್ಯದ ಮೇಲೆ ಕೆಲಸ ನಡೆಯುತ್ತಿದೆ ಎಂದು ಲಿಂಕ್ಡ್ ಇನ್ ಹೇಳಿದೆ. ಸದ್ಯ ಪರೀಕ್ಷೆ ಆರಂಭದ ಹಂತದಲ್ಲಿದ್ದು, ಶೀಘ್ರವೇ ಬೀಟಾ ಪರೀಕ್ಷೆ ಶುರುವಾಗಲಿದೆ.
ಸದಸ್ಯರನ್ನು ಅವರ ಸಮುದಾಯದ ಜೊತೆ ಸೇರಿಸಲು ಆಡಿಯೋ ಚಾಟಿಂಗ್ ನೆರವಾಗಲಿದೆ. ಸದಸ್ಯರ ಅನುಕೂಲಕ್ಕಾಗಿ ಈವೆಂಟ್ ಹಾಗೂ ಗ್ರೂಪ್ ಚಾಟಿಂಗ್ ನಲ್ಲಿಯೂ ಆಡಿಯೋ ಚಾಟಿಂಗ್ ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಲಿಂಕ್ಡ್ ಇನ್ ಹೇಳಿದೆ.
ಕ್ಲಬ್ ಹೌಸ್ ಆಡಿಯೋ ಚಾಟಿಂಗ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಅನೇಕ ಟೆಕ್ ಕಂಪನಿಗಳು ಕ್ಲಬ್ ಹೌಸ್ ಗೆ ಸ್ಪರ್ಧೆ ನೀಡುವ ಪ್ರಯತ್ನ ನಡೆಸುತ್ತಿವೆ. ಕ್ಲಬ್‌ಹೌಸ್ ಪ್ರಸ್ತುತ ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಇದನ್ನು 8 ಮಿಲಿಯನ್‌ಗಿಂತ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ.