ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ 2019 -20 ರ ಆರ್ಥಿಕ ವರ್ಷದಲ್ಲಿ 6 ಕೋಟಿಗೂ ಹೆಚ್ಚು ಸದಸ್ಯರಿಗೆ ಬಡ್ಡಿಹಣ ನೀಡಲಿದೆ.
ಎರಡು ಕಂತಿನಲ್ಲಿ ಹಣ ಪಾವತಿಸಲಾಗುವುದು. ಪಿಎಫ್ ಖಾತೆದಾರರಿಗೆ ಮೊದಲ ಕಂತಿನಲ್ಲಿ ಶೇಕಡ 8.15 ರಷ್ಟು ಬಡ್ಡಿ ನೀಡಲಿದ್ದು ಡಿಸೆಂಬರ್ ವೇಳೆಗೆ ಶೇಕಡ 0.35 ರಷ್ಟು ಬಡ್ಡಿ ಪಾವತಿ ಮಾಡಲಾಗುತ್ತದೆ. ಒಟ್ಟು ಶೇಕಡ 8.50 ರಷ್ಟು ಬಡ್ಡಿ ಪಾವತಿಸಲಾಗುವುದು.
ಚಂದಾದಾರರು ಪಿಎಫ್ ಖಾತೆಗೆ ಬಡ್ಡಿ ಬಂದಿರುವುದನ್ನು ಒಂದು ಮಿಸ್ ಕಾಲ್ ಮೂಲಕ ಪರಿಶೀಲಿಸಬಹುದು. ಖಾತೆಯಲ್ಲಿನ ಬ್ಯಾಲೆನ್ಸ್ ಕೂಡ ಮಿಸ್ ಕಾಲ್ ಮೂಲಕ ನೋಡಬಹುದಾಗಿದೆ. ನೊಂದಾಯಿತ ಮೊಬೈಲ್ ಸಂಖ್ಯೆಯಿಂದ 011 -22901406 ಗೆ ಮಿಸ್ ಕಾಲ್ ಕೊಡಬೇಕು. ಆಗ epfo ಸಂದೇಶದ ಮೂಲಕ ಪಿಎಫ್ ವಿವರದ ಮಾಹಿತಿ ಸಿಗಲಿದೆ.
ಬ್ಯಾಂಕ್ ಖಾತೆ ಸಂಖ್ಯೆ, ಪಾನ್ ನಂಬರ್, ಆಧಾರ್ ಸಂಖ್ಯೆ, ಮೊಬೈಲ್ ನಂಬರ್, ಯುಎಎನ್ ಜೊತೆಗೆ ಜೋಡಣೆ ಆಗಿರಬೇಕು. ಆಗ ಗ್ರಾಹಕರಿಗೆ ಉಚಿತವಾಗಿ ಮಾಹಿತಿ ನೀಡಲಾಗುವುದು. ಯುಎಎನ್ ಸಂಖ್ಯೆಯನ್ನು ಸಕ್ರಿಯಗೊಳಿಸಲು http://unifieportal-mem.epfindia.gov.in/memberinterface ಲಿಂಕ್ ಕ್ಲಿಕ್ ಮಾಡಬೇಕಿದೆ.