alex Certify ಲಾಸ್ಟ್ ಚಾನ್ಸ್: ನಾಳೆಯೊಳಗೆ ಆಧಾರ್ –ಪಾನ್ ಜೋಡಣೆಯಾಗದಿದ್ರೆ 1 ಸಾವಿರ ರೂ. ದಂಡ; PAN ನಿಷ್ಕ್ರಿಯ – ತೆರಿಗೆ ಇಲಾಖೆಯಿಂದ ಕೊನೆ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಸ್ಟ್ ಚಾನ್ಸ್: ನಾಳೆಯೊಳಗೆ ಆಧಾರ್ –ಪಾನ್ ಜೋಡಣೆಯಾಗದಿದ್ರೆ 1 ಸಾವಿರ ರೂ. ದಂಡ; PAN ನಿಷ್ಕ್ರಿಯ – ತೆರಿಗೆ ಇಲಾಖೆಯಿಂದ ಕೊನೆ ಎಚ್ಚರಿಕೆ

ನವದೆಹಲಿ: ಮಾರ್ಚ್ 31 ರೊಳಗೆ ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿ, ಇಲ್ಲವೇ ದಂಡ ಪಾವತಿಸಿ ಎಂದು ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಗಡುವು ಮುಗಿಯಲು ಕೇವಲ ಒಂದು ದಿನ ಬಾಕಿ ಉಳಿದಿದ್ದು, ಮಾರ್ಚ್ 31 ರೊಳಗೆ ತೆರಿಗೆದಾರರು ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ.

ಮಾರ್ಚ್ 31 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ, 500 ರಿಂದ 1,000 ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ.

ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31, 2022 ಆಗಿದೆ. ಗಡುವಿನ ಮೊದಲು ಕಾರ್ಯ ಪೂರ್ಣಗೊಳಿಸದಿದ್ದರೆ PAN ನಿಷ್ಕ್ರಿಯಗೊಳ್ಳಲಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...