![](https://kannadadunia.com/wp-content/uploads/2019/03/aadhar-pan-link-1.jpg)
ನವದೆಹಲಿ: ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಜೋಡಣೆ ಸೇರಿದಂತೆ ಹಲವು ತೆರಿಗೆ ಸಂಬಂಧಿತ ಗಡುವುಗಳನ್ನು ಕೇಂದ್ರ ಸರ್ಕಾರ ಮುಂದೂಡಿಕೆ ಮಾಡಿದೆ.
ಇದುವರೆಗೂ ಜೂನ್ 30ರವರೆಗೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ಜೋಡಣೆಗೆ ಕೊನೆಯ ದಿನವಾಗಿತ್ತು. ಈಗ 2021ರ ಮಾರ್ಚ್ 31 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
2019 -20 ನೇ ಸಾಲಿನ ವಿಳಂಬಿತ ಪರಿಷ್ಕೃತ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದ್ದು, ಅದೇ ರೀತಿ ಕಂಪನಿಗಳು ಫಾರಂ -16 ವಿತರಿಸುವ ಅಂತಿಮ ದಿನಾಂಕವನ್ನು ಆಗಸ್ಟ್ 15ರ ವರೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.