ನವದೆಹಲಿ: ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಮಾಡಲು ಮಾರ್ಚ್ 31 ಕೊನೆಯ ದಿನವಾಗಿದೆ. ಗಡುವು ಮುಗಿದ ನಂತರ ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಮಾಡದಿದ್ದರೆ 1000 ರೂಪಾಯಿ ದಂಡ ವಿಧಿಸಲಾಗುವುದು.
ಇದರೊಂದಿಗೆ ಪಾನ್ ಕಾರ್ಡ್ ಮೂಲಕ ವಹಿವಾಟು ನಡೆಸಲು ಸಾಧ್ಯವಾಗದಂತೆ ನಿರ್ಬಂಧಿತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಮಾಡಲು ಸರ್ಕಾರ ಅನೇಕ ಬಾರಿ ಗಡುವು ವಿಸ್ತರಿಸಿದೆ. ಈಗ ಗಡುವು ವಿಸ್ತರಿಸುವ ಕುರಿತಾಗಿ ಯಾವುದೇ ಸೂಚನೆ ಬಂದಿಲ್ಲ. ಆದಾಯ ತೆರಿಗೆ ಕಾಯ್ದೆ ಹೊಸ ಸೆಕ್ಷನ್ ಅನ್ವಯ ಮಾರ್ಚ್ 31 ರೊಳಗೆ ಪಾನ್ ಗೆ ಆಧಾರ್ ಜೋಡಣೆ ಮಾಡದಿದ್ದರೆ 1000 ರೂಪಾಯಿ ದಂಡ ಕಟ್ಟಬೇಕಿದೆ ಎನ್ನಲಾಗಿದೆ.