ಭಾರತದಲ್ಲಿ ಹೆಣ್ಣು ಮಕ್ಕಳು ಜನಿಸಿದ ತಕ್ಷಣ ಪಾಲಕರು ಅವ್ರ ಮದುವೆ ಚಿಂತೆ ಶುರು ಮಾಡ್ತಾರೆ. ನಿಮ್ಮ ಮನೆಯಲ್ಲೂ ಹೆಣ್ಣು ಮಗಳಿದ್ದು, ಮದುವೆ ಚಿಂತೆ ಕಾಡ್ತಿದ್ದರೆ ಇಂದೇ ಈ ಚಿಂತೆ ಬಿಡಿ. ದಿನಕ್ಕೆ 127 ರೂಪಾಯಿ ಉಳಿಸಿ ಮದುವೆ ಸಂದರ್ಭದಲ್ಲಿ 27 ಲಕ್ಷ ರೂಪಾಯಿ ಪಡೆಯಿರಿ. ಹೆಣ್ಣು ಹೆತ್ತ ಪಾಲಕರಿಗಾಗಿ ಎಲ್ಐಸಿ ಕನ್ಯಾದಾನ್ ಪಾಲಿಸಿ ನೀಡ್ತಿದೆ.
ಈ ಪಾಲಿಸಿ ಪಡೆದವರು ಪ್ರತಿದಿನ 121 ರೂಪಾಯಿ ಅಂದರೆ ಪ್ರತಿ ತಿಂಗಳು 3,600 ರೂಪಾಯಿ ಹೂಡಿಕೆ ಮಾಡಬೇಕು. ನೀವು ಪ್ರೀಮಿಯಂ ಕಡಿಮೆ ಮಾಡಬಹುದು. ಪ್ರತಿದಿನ 121 ರೂಪಾಯಿ ಠೇವಣಿ ಇಟ್ಟರೆ, 25 ವರ್ಷಗಳಲ್ಲಿ ನಿಮಗೆ 27 ಲಕ್ಷ ರೂಪಾಯಿ ಸಿಗುತ್ತದೆ. ಪಾಲಿಸಿ ತೆಗೆದುಕೊಂಡ ನಂತರ ಸಾವನ್ನಪ್ಪಿದರೆ ಕುಟುಂಬವರು ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಪ್ರತಿ ವರ್ಷ 1 ಲಕ್ಷ ರೂಪಾಯಿಗಳನ್ನು ಮಗಳಿಗೆ ನೀಡಲಾಗುವುದು. ಇದಲ್ಲದೆ 25 ವರ್ಷಗಳು ಪೂರ್ಣಗೊಂಡ ನಂತರ, ಪಾಲಿಸಿ ನಾಮಿನಿಗೆ ಪ್ರತ್ಯೇಕವಾಗಿ 27 ಲಕ್ಷ ರೂಪಾಯಿ ಸಿಗುತ್ತದೆ.
ಪಾಲಿಸಿಯನ್ನು ತೆಗೆದುಕೊಂಡ ನಂತರ ಯಾವುದೇ ಕಾರಣದಿಂದ ಪಾಲಿಸಿದಾರನು ಸಾವನ್ನಪ್ಪಿದ್ದರೆ ಕುಟುಂಬದ ಉಳಿದ ಸದಸ್ಯರು ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಈ ಪಾಲಿಸಿಯನ್ನು 25 ವರ್ಷಗಳ ಕಾಲ ತೆಗೆದುಕೊಳ್ಳಬೇಕು. ಪ್ರೀಮಿಯಂ ಅನ್ನು 22 ವರ್ಷಗಳವರೆಗೆ ಮಾತ್ರ ಪಾವತಿಸಬೇಕಾಗುತ್ತದೆ.
ಪಾಲಿಸಿದಾರನಿಗೆ ಕನಿಷ್ಠ 30 ವರ್ಷ ವಯಸ್ಸು ಮತ್ತು ಮಗಳಿಗೆ 1 ವರ್ಷ ವಯಸ್ಸಾಗಿರಬೇಕು. ನಿಮ್ಮ ಮತ್ತು ನಿಮ್ಮ ಮಗಳ ವಿಭಿನ್ನ ವಯಸ್ಸಿನ ಪ್ರಕಾರ ಪಾವತಿ ಭಿನ್ನವಾಗಿರುತ್ತದೆ.