ಬೆಂಗಳೂರು: ಎಲ್ಐಸಿ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸಲು ವಿಶೇಷ ನವೀಕರಣ ಅಭಿಯಾನವನ್ನು ಎಲ್ಐಸಿ ಆರಂಭಿಸಿದೆ.
ಫೆಬ್ರವರಿ 7 ರಿಂದ ಮಾರ್ಚ್ 25 ರವರೆಗೆ ವಿಶೇಷ ನವೀಕರಣ ಅಭಿಯಾನ ನಡೆಯಲಿದೆ ಎಂದು ಎಲ್ಐಸಿ ಮಾಹಿತಿ ನೀಡಿದೆ. ಪ್ರೀಮಿಯಂ ಪಾವತಿ ಅವಧಿಯಲ್ಲಿ ರದ್ದಾದ ಮತ್ತು ಪಾಲಿಸಿ ಅವಧಿ ಪೂರ್ಣವಾಗದ ಪಾಲಿಸಿಗಳನ್ನು ನವೀಕರಿಸಬಹುದಾಗಿದೆ.
ಒಟ್ಟು ಪ್ರೀಮಿಯಂ ಪರಿಗಣಿಸಿ ವಿಳಂಬ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಆರೋಗ್ಯ ಮತ್ತು ವಿಮಾ ಯೋಜನೆಗಳ ಗ್ರಾಹಕರು ವಿಳಂಬ ಶುಲ್ಕದಲ್ಲಿ ವಿನಾಯಿತಿ ಪಡೆಯಬಹುದು. ಷರತ್ತುಗಳಿಗೆ ಒಳಪಟ್ಟು ನಿರ್ದಿಷ್ಟ ಯೋಜನೆಗಳ ವಿಮಾ ಪಾಲಿಸಿಯನ್ನು, ಮೊದಲ ಸಲ ಪಾವತಿಸದ ಪ್ರೀಮಿಯಂ ದಿನಾಂಕದಿಂದ 5 ವರ್ಷದ ಒಳಗೆ ಪಾಲಿಸಿ ನವೀಕರಿಸಬಹುದಾಗಿದೆ ಎಂದು ಹೇಳಲಾಗಿದೆ.