alex Certify ಎಲ್ಐಸಿ ಹೊಸ ಯೋಜನೆಯಲ್ಲಿ ಸಿಗ್ತಿದೆ ಉಳಿತಾಯದ ಜೊತೆ ಈ ಎಲ್ಲ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಐಸಿ ಹೊಸ ಯೋಜನೆಯಲ್ಲಿ ಸಿಗ್ತಿದೆ ಉಳಿತಾಯದ ಜೊತೆ ಈ ಎಲ್ಲ ಲಾಭ

ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಆಲೋಚನೆಯಲ್ಲಿದ್ದರೆ ಎಲ್ಐಸಿ ಉತ್ತಮ ಆಯ್ಕೆಗಳಲ್ಲಿ ಒಂದು. ಎಲ್ಐಸಿ ಈಗ ಬಚತ್ ಪ್ಲಸ್ (Bachat Plus) ವಿಮಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಉಳಿತಾಯದ ಜೊತೆಗೆ ವಿಮೆಯ ಲಾಭ ಪಡೆಯಬಹುದು. ಮುಕ್ತಾಯದ ಅವಧಿಗೆ ಮೊದಲೇ ಪಾಲಿಸಿದಾರ ಸಾವನ್ನಪ್ಪಿದ್ರೆ ನಾಮಿನಿಗೆ ಹಣಕಾಸಿನ ನೆರವು ನೀಡಲಾಗುವುದು.

ಈ ಯೋಜನೆಯ ಮುಕ್ತಾಯ ಅವಧಿ ಐದು ವರ್ಷಗಳು. ಮುಕ್ತಾಯದ ಮೊದಲು ಪಾಲಿಸಿ ಅವಧಿಯಲ್ಲಿ ಪಾಲಿಸಿದಾರ ಮರಣ  ಹೊಂದಿದರೆ ನಾಮಿನಿಗೆ ನೆರವು ಸಿಗಲಿದೆ. ಮೆಚ್ಯೂರಿಟಿ ಸಮಯದಲ್ಲಿ ಪಾಲಿಸಿದಾರ ಜೀವಂತವಾಗಿದ್ದರೆ ಅವನು ಹಣ ಪಡೆಯುತ್ತಾನೆ. ಈ ಯೋಜನೆಯಲ್ಲಿ ಕನಿಷ್ಠ ಒಂದು ಲಕ್ಷ ರೂಪಾಯಿ ಪಾಲಿಸಿ ತೆಗೆದುಕೊಳ್ಳಬೇಕು. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಈ ಯೋಜನೆಯಲ್ಲಿ ಪಾಲಿಸಿದಾರನಿಗೆ ಸಾಲ ಸೌಲಭ್ಯ ಸಿಗುತ್ತದೆ.

ಎಲ್‌ಐಸಿ ಕೆಲವು ಸಮಯದ ಹಿಂದೆ ಜೀವನ್ ಭೀಮಾ ಜ್ಯೋತಿ ಯೋಜನೆಯನ್ನು ಪ್ರಾರಂಭಿಸಿದೆ. ಇದು ಉಳಿತಾಯ ಯೋಜನೆಯಾಗಿದೆ. ಈ ವಿಮಾ ಯೋಜನೆಯಲ್ಲಿ ಪಾಲಿಸಿದಾರನ ಅಕಾಲಿಕ ಮರಣದ ನಂತರ, ನಾಮಿನಿಗೆ ಸಂಪೂರ್ಣ ಮೊತ್ತ ಸಿಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...