ಇಂದು ಹಾಗೂ ನಾಳೆಯನ್ನು ಸುರಕ್ಷಿತಗೊಳಿಸಲು ಎಲ್ ಐ ಸಿ ವಿಶೇಷ ಯೋಜನೆಗಳನ್ನು ನೀಡ್ತಿದೆ. ಎಲ್‌ಐಸಿ, ಜೀವನ್ ಲಾಬ್ ಪ್ಲಾನ್ ನೀಡ್ತಿದೆ. ಪ್ರತಿದಿನ 233 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ 17 ಲಕ್ಷ ರೂಪಾಯಿ ಫಂಡ್ ಸುರಕ್ಷಿತಗೊಳಿಸಬಹುದು. ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಎಲ್ಐಸಿ ಈ ಯೋಜನೆಯನ್ನು ಸಿದ್ಧಪಡಿಸಿದೆ.
ಇದು ನಾನ್ ಲಿಂಕ್ ಪಾಲಿಸಿಯಾಗಿದೆ. ಈ ಪಾಲಿಸಿಗೂ ಷೇರು ಮಾರುಕಟ್ಟೆಗೂ ಯಾವುದೇ ಸಂಬಂಧವಿಲ್ಲ. ಇದು ಸೀಮಿತ ಪ್ರೀಮಿಯಂ ಯೋಜನೆಯಾಗಿದೆ. ಮಕ್ಕಳ ಮದುವೆ, ಅಧ್ಯಯನ ಮತ್ತು ಆಸ್ತಿ ಖರೀದಿಗೆ ಈ ಯೋಜನೆ ಬಳಸಬಹುದು. ಈ ಯೋಜನೆ ಗ್ರಾಹಕರಿಗೆ ಲಾಭಕರ ಹಾಗೂ ಸುರಕ್ಷಿತವಾಗಿದೆ. 8ರಿಂದ 59 ವರ್ಷ ವಯಸ್ಸಿನ ವ್ಯಕ್ತಿಗಳು ಈ ಯೋಜನೆ ಪಡೆಯಬಹುದು. ಪಾಲಿಸಿ ಅವಧಿ 16ರಿಂದ 25 ವರ್ಷಗಳು. ಕನಿಷ್ಠ 2 ಲಕ್ಷ ರೂಪಾಯಿ ಮೌಲ್ಯದ ಪಾಲಿಸಿ ತೆಗೆದುಕೊಳ್ಳಬೇಕು. ಮೂರು ವರ್ಷಗಳ ಪ್ರೀಮಿಯಂ ತುಂಬಿದ ನಂತ್ರ ಸಾಲ ಸೌಲಭ್ಯ ಪಡೆಯಬಹುದು.
ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರನು ಸತ್ತರೆ, ಸಾವಿನವರೆಗೂ ಎಲ್ಲಾ ಪ್ರೀಮಿಯಂಗಳನ್ನು ಪಾವತಿಸಿದ್ದರೆ, ನಾಮಿನಿಗೆ ಪಾವತಿ ನಿಯಮದ ಪ್ರಕಾರ ಹಣ ನೀಡಲಾಗುತ್ತದೆ.
ʼಆರ್ಥಿಕʼ ಸಂಕಷ್ಟಕ್ಕೊಳಗಾದರೂ ಎದೆಗುಂದದೆ ಯಶಸ್ಸು ಸಾಧಿಸಿದ ಶೆಫ್
ಒಬ್ಬ ವ್ಯಕ್ತಿಯು 23 ವರ್ಷ ವಯಸ್ಸಿನಲ್ಲಿ 16 ವರ್ಷಗಳ ಅವಧಿಯ, 10 ಲಕ್ಷದ ಪಾಲಿಸಿ ಆಯ್ಕೆ ಮಾಡಿಕೊಂಡರೆ, ಅವನು 10 ವರ್ಷಗಳವರೆಗೆ ಪ್ರತಿದಿನ 233 ರೂಪಾಯಿ ಪಾವತಿಸಬೇಕಾಗುತ್ತದೆ. ಆತ ಒಟ್ಟೂ 855107 ರೂಪಾಯಿಯನ್ನು ತುಂಬಿದಂತಾಗುತ್ತದೆ. ಈ ಯೋಜನೆ ಮುಕ್ತಾಯವಾದ್ಮೇಲೆ, ವ್ಯಕ್ತಿಯ 39ನೇ ವಯಸ್ಸಿನಲ್ಲಿ 17,13,000 ರೂಪಾಯಿ ಪಡೆಯುತ್ತಾನೆ.