ಜೀವ ವಿಮಾ ನಿಗಮದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರವೇ. ಎಲ್ಐಸಿಯಲ್ಲಿ ಪಾಲಿಸಿಗಳನ್ನು ಮಾಡುವ ಮೂಲಕ ಜನ ಮುಂದಿನ ಜೀವನ ಸುಖಕರವಾಗಿರೋದಕ್ಕೆ ಪ್ರಯತ್ನ ಪಡುತ್ತಾರೆ. ಇದೀಗ ಮತ್ತೊಂದು ಯೋಜನೆ ನಿಮ್ಮ ವೃದ್ಧಾಪ್ಯವನ್ನು ನೆಮ್ಮದಿಯಿಂದ ಕಳೆಯುವಂತೆ ಮಾಡುತ್ತದೆ. ಹಾಗಾದ್ರೆ ಯಾವುದು ಆ ಪಾಲಿಸಿ ಅಂತೀರಾ ಮುಂದೆ ಓದಿ.
ದಿನಕ್ಕೆ 80 ರೂಪಾಯಿ ಹೂಡಿಕೆ ಮಾಡುವ ಮೂಲಕ ನಿಮ್ಮ ವೃದ್ಧಾಪ್ಯದಲ್ಲಿ ನೀವು ಖುಷಿಯಿಂದ ನೆಮ್ಮದಿಯಿಂದ ಇರಬಹುದು. ಅಂದರೆ 80 ರೂಪಾಯಿ ಹೂಡಿಕೆ ಮಾಡಿ 28,000 ರೂಪಾಯಿ ಪಿಂಚಣಿ ಪಡೆಯಬಹುದು. ಎಲ್ಐಸಿಯ ಜೀವನ್ ಆನಂದ್ ಪಾಲಿಸಿ ಅಡಿಯಲ್ಲಿ ಬರುವ ಈ ಯೋಜನೆ ವೃದ್ಧಾಪ್ಯಕ್ಕೆ ನೆರವಾಗಲಿದೆ.
ಇನ್ನು ಈ ಪಾಲಿಸಿಯಲ್ಲಿ ಹೂಡಿಕೆ ಮಾಡಲು ನಿಮಗೆ 28 ವರ್ಷ ವಯಸ್ಸಾಗಿರಬೇಕು. ಇಲ್ಲಿ ಹೂಡಿಕೆ ಮಾಡಿದ ವ್ಯಕ್ತಿ ಎರಡರ ಅಂದರೆ ಹೂಡಿಕೆ ಮತ್ತು ವಿಮೆಯ ಲಾಭವನ್ನೂ ಪಡೆಯುತ್ತಾನೆ. ಇದ್ರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಎಲ್ಐಸಿ ಕಚೇರಿಗೆ ಭೇಟಿ ನೀಡಬಹುದು.