
ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದಿಂದ ರದ್ದಾದ ಪಾಲಿಸಿ ನವೀಕರಣ ಅಭಿಯಾನ ಕೈಗೊಳ್ಳಲಾಗಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸಲು ಅಭಿಯಾನ ಕೈಗೊಳ್ಳಲಾಗಿದೆ. ರದ್ದಾದ ವೈಯಕ್ತಿಕ ಪ್ಲಾನ್ ಗಳಿಗೆ ವಿಶೇಷ ನವೀಕರಣ ಅಭಿಯಾನ ಅನ್ವಯವಾಗಲಿದ್ದು, ಅಕ್ಟೋಬರ್ 22ರ ವರೆಗೆ ನಡೆಯಲಿದೆ ಎಂದು ಹೇಳಲಾಗಿದೆ.
ಎಲ್ಐಸಿ ಗ್ರಾಹಕರು ನಿರ್ದಿಷ್ಟಪಡಿಸಿದ ಆರೋಗ್ಯ, ಕಿರು ವಿಮೆ ಯೋಜನೆ ಮೊದಲಾದ ಅರ್ಹ ಯೋಜನೆಗಳ ಪಾಲಿಸಿಯನ್ನು ಷರತ್ತಿಗೆ ಒಳಪಟ್ಟು ಮೊದಲ ಬಾರಿಗೆ ಪಾವತಿಸಿದ ಪ್ರೀಮಿಯಂ ದಿನಾಂಕದಿಂದ ಐದು ವರ್ಷದ ಒಳಗೆ ನವೀಕರಿಸಬಹುದಾಗಿದೆ. ಒಟ್ಟು ಪ್ರೀಮಿಯಂ ಪರಿಗಣಿಸಿ ವಿಳಂಬ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.