
ನವದೆಹಲಿ: ಭಾರತೀಯ ಜೀವ ವಿಮಾ ನಿಗಮ ಪಾಲಿಸಿದಾರರಿಗೆ ಸಂಖ್ಯೆ ಅಪ್ಡೇಟ್ ಮಾಡುವಂತೆ ತಿಳಿಸಿದೆ. ಎಲ್ಐಸಿ ಐಪಿಓ ಗೆ ಸಜ್ಜಾಗುತ್ತಿದ್ದು, ಗ್ರಾಹಕರಿಗೆ ಪಾನ್ ಸಂಖ್ಯೆ ಅಪ್ಡೇಟ್ ಮಾಡುವಂತೆ ತಿಳಿಸಲಾಗಿದೆ.
ಎಲ್ಐಸಿ ವಿಮೆ ಹೊಂದಿದ ಗ್ರಾಹಕರಿಗೆ ಐಪಿಒ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿದೆ. ಎಲ್ಐಸಿಯಿಂದ ಐಪಿಒ ಮೂಲಕ ಮಾರಾಟ ಮಾಡುವ ಷೇರುಗಳಲ್ಲಿ ಶೇಕಡ 10 ರವರೆಗೆ ಷೇರುಗಳನ್ನು ವಿಮೆ ಪಾಲಿಸಿ ಹೊಂದಿದವರಿಗೆ ಮೀಸಲಿಡಲಾಗುತ್ತದೆ. ಡಿಮ್ಯಾಟ್ ಖಾತೆ ಇಲ್ಲದವರು ತಮ್ಮ ಖರ್ಚಿನಲ್ಲಿ ಡಿಮ್ಯಾಟ್ ಖಾತೆ ತೆರೆಯಬಹುದಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮದಿಂದ ಮಾಹಿತಿ ನೀಡಲಿದೆ.