ಲಿಯೊನಾರ್ಡೊ ಡಾ ವಿಂಚಿಯ ಡ್ರಾಯಿಂಗ್ ಜಗದ್ವಿಖ್ಯಾತ. ಅವರು ರಚಿಸಿದ ಚಿತ್ರವೊಂದು ಈಗ ಬೆಲೆಯ ಕಾರಣಕ್ಕೆ ವಿಶ್ವದ ಗಮನ ಸೆಳೆಯುತ್ತಿದೆ.
ಅಂದು ಲಿಯೊನಾರ್ಡೊ ಡಾ ವಿಂಚಿ ಚಿತ್ರಿಸಿದ ಕರಡಿಯ ತಲೆಯ ರೇಖಾಚಿತ್ರವು ಈಗ ಲಂಡನ್‌ನಲ್ಲಿ ಮುಂಬರುವ ಹರಾಜಿನಲ್ಲಿ 16 ಮಿಲಿಯನ್ ಡಾಲರ್‌ಗೆ ಮಾರಾಟವಾಗಬಹುದು ಎಂಬ ನಿರೀಕ್ಷೆ ಇದೆ.
ಕೊರೊನಾ ಲಸಿಕೆಯ 2ನೇ ಡೋಸ್ ತೆಗೆದುಕೊಳ್ಳಲು ತಡವಾಗ್ತಿದೆಯಾ….?
‘ಹೆಡ್ ಆಫ್ ಬೇರ್’ ಎಂದು ಕರೆಯಲ್ಪಡುವ ಸ್ಕೆಚ್‌ನ್ನು ಡಾ ವಿನ್ಸಿ ಅವರು ಮಸುಕಾದ ಗುಲಾಬಿ-ಬೀಜ್ ಕಾಗದದ ಮೇಲೆ ಚಿತ್ರಿಸಿದ್ದಾರೆ. ಜುಲೈ 8 ರಂದು ಹರಾಜು ನಡೆಯಲಿದೆ. ರೇಖಾಚಿತ್ರದ ಮಾಲೀಕತ್ವ ಬ್ರಿಟಿಷ್ ಚಿತ್ರಕಾರ ಥಾಮಸ್ ಲಾರೆನ್ಸ್ ಅವರದು.
ಇದು ಮೇ 8ರಿಂದ ನ್ಯೂಯಾರ್ಕ್‌ನ ಕ್ರಿಸ್ಟೀಸ್ ರಾಕ್‌ಫೆಲ್ಲರ್ ಕೇಂದ್ರದಲ್ಲಿ ಪ್ರದರ್ಶಿಸಲಾಗಿದೆ ಮತ್ತು ಮೇ 20 ಮತ್ತು ಮೇ 25 ರ ನಡುವೆ ಹಾಂಕಾಂಗ್‌ನ ಕ್ರಿಸ್ಟೀಸ್‌ನಲ್ಲಿ ಪ್ರದರ್ಶಿಸಲ್ಪಡಲಿದೆ.