alex Certify ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: 10 ರೂ.ಗೆ ಎಲ್ಇಡಿ ಬಲ್ಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: 10 ರೂ.ಗೆ ಎಲ್ಇಡಿ ಬಲ್ಬ್

ನವದೆಹಲಿ: ಸರ್ಕಾರಿ ಸ್ವಾಮ್ಯದ CESL ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲು ಮುಂದಾಗಿದ್ದು, ಗ್ರಾಮ ಉಜಾಲಾ ಯೋಜನೆಯಡಿ ಹೆಚ್ಚಿನ ಸಬ್ಸಿಡಿಯೊಂದಿಗೆ 10 ರೂ. ದರದಲ್ಲಿ ಎಲ್‌ಇಡಿ ಬಲ್ಬ್‌ ಗಳನ್ನು ವಿತರಿಸಲಿದೆ.

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಪ್ರತಿ ವರ್ಷ ಡಿಸೆಂಬರ್ 14 ರಂದು ಆಚರಿಸಲಾಗುತ್ತದೆ, ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್(CESL), ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್(EESL) ಸ್ವಾಮ್ಯದ ಅಂಗಸಂಸ್ಥೆಯ ಪ್ರಮುಖ ಗ್ರಾಮ ಉಜಾಲಾ ಕಾರ್ಯಕ್ರಮ ವಿಸ್ತರಿಸಲಿದೆ ಎಂದು ವಿದ್ಯುತ್ ಸಚಿವಾಲಯದ ಹೇಳಿಕೆ ತಿಳಿಸಿದೆ.

ಎಲ್‌ಇಡಿ ಬಲ್ಬ್‌ ಗಳನ್ನು 5 ರಾಜ್ಯಗಳ 2,579 ಹಳ್ಳಿಗಳಲ್ಲಿ ಕಡಿಮೆ ಬೆಲೆಗೆ ನೀಡಲಾಗುವುದು. ಬಿಹಾರ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್ಚು ಸಬ್ಸಿಡಿ ದರದಲ್ಲಿ 10 ರೂಪಾಯಿಗೆ ಬಲ್ಬ್ ವಿತರಿಸಲಾಗುವುದು. 7-ವ್ಯಾಟ್ ಮತ್ತು 12-ವ್ಯಾಟ್ ಶಕ್ತಿ-ಸಮರ್ಥ LED ಬಲ್ಬ್‌ ಗಳನ್ನು ಒದಗಿಸಲಿದೆ. ಮೂರು ವರ್ಷಗಳ ಗ್ಯಾರಂಟಿ ಅವಧಿ ಇದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...