ಟೊಯೋಟಾ ಮೊಬಿಲಿಟಿ ಸೇವೆಯ ಮೂಲಕ ಕಾರು ಗುತ್ತಿಗೆ ಮತ್ತು ಚಂದಾದಾರಿಕೆ ಕಾರ್ಯಕ್ರಮವನ್ನು ಘೋಷಿಸಿದೆ. ಇದ್ರಡಿ ನೀವು ಕಂಪನಿಯ ಕಾರನ್ನು 3 ರಿಂದ 5 ವರ್ಷಗಳವರೆಗೆ ಬಾಡಿಗೆಗೆ ಬಳಸಬಹುದು.
ದೆಹಲಿ-ಎನ್‌ಸಿಆರ್, ಬೆಂಗಳೂರು ಮತ್ತು ಮುಂಬೈನಂತಹ ನಗರಗಳಲ್ಲಿ ಗುತ್ತಿಗೆ ಮತ್ತು ಚಂದಾದಾರಿಕೆ ಸೌಲಭ್ಯವನ್ನು ಕಂಪನಿಯು ಪ್ರಾರಂಭಿಸಿದೆ.
ಕಂಪನಿಯು ಕ್ರಮೇಣ ಇತರ ನಗರಗಳಲ್ಲಿಯೂ ಈ ಸೇವೆಯನ್ನು ಪ್ರಾರಂಭಿಸಲಿದೆ. 10 ನಗರಗಳಲ್ಲಿ ಶೀಘ್ರವೇ ಸೇವೆ ಶುರುವಾಗಲಿದೆ. ಇದನ್ನು ಉತ್ತಮಗೊಳಿಸಲು ಕಂಪನಿ ಕಿಂಟೊ, ಎಎಲ್‌ಡಿ ಆಟೋಮೋಟಿವ್ ಇಂಡಿಯಾ ಮತ್ತು ಎಸ್‌ಎಂಎಎಸ್ ಆಟೋ ಲೀಸಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಸೇವೆಯಡಿ ಕಾರು ಗ್ರಾಹಕರು ತಮ್ಮ ಆದ್ಯತೆಯ ಕಾರನ್ನು ಆಯ್ಕೆ ಮಾಡಿಕೊಂಡು ಅದನ್ನು ನಿಗದಿತ ಅವಧಿಗೆ (3-5 ವರ್ಷಗಳು) ಗುತ್ತಿಗೆಗೆ ಪಡೆಯಬಹುದು. ಇದಕ್ಕಾಗಿ ಗ್ರಾಹಕರು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಮೊತ್ತ ಎಷ್ಟು ಸಮಯದವರೆಗೆ ಕಾರನ್ನು ಗುತ್ತಿಗೆಗೆ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಗ್ರಾಹಕರು ಪ್ರತಿ ತಿಂಗಳು ಈ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಕಾರ್ ಗುತ್ತಿಗೆ ಮುಗಿಯುವವರೆಗೂ ನೀವು ಕಾರಿನ ಮಾಲೀಕರಾಗಿರುತ್ತೀರಿ.