ತಡವಾಗಿ ಪಾವತಿ ಮಾಡಲಾದ ಮಾಸಿಕ ಜಿಎಸ್‌ಟಿ ರಿಟರ್ನ್ಸ್ ಮೇಲೆ ತಡವಾದ ಶುಲ್ಕ ವಿಧಿಸುವ ಸಂಬಂಧ ಮಾಡಲಾದ ಮಾರ್ಪಾಡುಗಳ ಕಾರಣದಿಂದಾಗಿ ಸಣ್ಣ ಉದ್ಯಮಗಳಿಗೆ ರಿಲೀಫ್ ಕೊಟ್ಟು, ಸರ್ಕಾರದ ಆದಾಯದ ಮೂಲ ಏರಿಸಲಿದೆ ಎಂದು ತೆರಿಗೆ ತಜ್ಞರು ತಿಳಿಸಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಸಲಾದ ಜಿಎಸ್‌ಟಿ ಸಮಿತಿಯ ಸಭೆಯಲ್ಲಿ ರಾಜ್ಯಗಳ ಸಚಿವರೂ ಸಹ ಇದ್ದರು. ಇದೇ ವೇಳೆ ತೆರಿಗೆ ಪಾವತಿದಾರರಿಗೆ ರಿಲೀಫ್ ಕೊಡುವ ಈ ಮಹತ್ವದ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಜುಲೈ 2017-ಏಪ್ರಿಲ್ 2021ರ ನಡುವೆ ಜಿಎಸ್‌ಟಿಆರ್-3ಬಿಯನ್ನು ಭರ್ತಿ ಮಾಡುವುದು ತಡವಾದಲ್ಲಿ ವಿಧಿಸಲಾಗುವ ತಡ ಶುಲ್ಕವನ್ನು 500ರೂ/ರಿಟರ್ನ್‌ನಂತೆ ತೆರಿಗೆ ಪಾವತಿ ಬಾಕಿ ಉಳಿಸಿಕೊಳ್ಳದಿರುವ ಮಂದಿಗೆ ವಿಧಿಸಲಾಗುವುದು.
ಆಗಸ್ಟ್ 31, 2021ರ ಒಳಗೆ ರಿಟರ್ನ್ಸ್ ಸಲ್ಲಿಸುವ ತೆರಿಗೆದಾರರಿಗೆ ಗರಿಷ್ಠ 1000 ಗಳವರೆಗೂ ತಡ ಶುಲ್ಕ ವಿಧಿಸಲಾಗುವುದು.
ಇದರೊಂದಿಗೆ, ವಾರ್ಷಿಕ ಎರಡು ಕೋಟಿರೂಗಳವರೆಗೂ ಟರ್ನ್‌ಓವರ್ ಇರುವ ಮಂದಿಗೆ 2020-21ರ ವರ್ಷದಲ್ಲಿ ವಾರ್ಷಿಕ ರಿಟರ್ನ್ಸ್ ಸಲ್ಲಿಸುವುದನ್ನು ಐಚ್ಛಿಕವಾಗಿ ಮಾಡಲು ಸಮಿತಿ ನಿರ್ಧರಿಸಿದೆ.
ಇದರೊಂದಿಗೆ, ವಾರ್ಷಿಕ 5 ಕೋಟಿ ರೂಗಳಿಗಿಂತ ಹೆಚ್ಚಿನ ಟರ್ನ್‌ಓವರ್ ಇರುವವರು, ಜಿಎಸ್‌ಟಿಆರ್-9ಸಿ ಅರ್ಜಿಯೊಂದಿಗೆ ಪೇಮೆಂಟ್‌ಗಳ ಪ್ರಕ್ರಿಯೆಗಳು ಮುಗಿದು, ಬ್ಯಾಂಕುಗಳ ಖಾತೆಗಳಲ್ಲಿ ಠೇವಣಿಗಳನ್ನು ಕಟ್ಟಲಾಗಿದೆ ಎಂದು ಖಾತ್ರಿ ಪಡಿಸಬೇಕಾಗುತ್ತದೆ.