ನವದೆಹಲಿ: ಲ್ಯಾಂಡ್ ಲೈನ್ ಫೋನ್ ನಿಂದ ಮೊಬೈಲ್ ಗೆ ಕರೆ ಮಾಡಲು ಜನವರಿ 15 ರಿಂದ 0 ಒತ್ತಬೇಕಿದೆ. ಸಂಖ್ಯೆಯನ್ನು ನಮೂದಿಸುವ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಟೆಲಿಕಾಂ ಕಂಪನಿಗಳಿಗೆ ಸರ್ಕಾರದ ವತಿಯಿಂದ ಸೂಚನೆ ನೀಡಲಾಗಿದೆ.
ಹೀಗೆ ಬದಲಾವಣೆ ಮಾಡುವುದರಿಂದ ಮೊಬೈಲ್ ಸೇವೆಗಳಿಗೆ ಹೆಚ್ಚುವರಿಯಾಗಿ 254.4 ಕೋಟಿ ನಂಬರ್ ಗಳು ಸೇರ್ಪಡೆಯಾಗಲಿವೆ. ಭಾರತದಲ್ಲಿ ಲ್ಯಾಂಡ್ ಲೈನ್ ಬಳಕೆದಾರರ ಸಂಖ್ಯೆ ಇಳಿಮುಖವಾಗುತ್ತಿದೆ. ಹೆಚ್ಚಿನ ಮೊಬೈಲ್ ನಂಬರ್ ಗಳು ಲಭ್ಯವಾಗುವಂತೆ ಮಾಡಲು ಲ್ಯಾಂಡ್ ಲೈನ್ ನಿಂದ ಕರೆ ಮಾಡುವಾಗ 10 ಸಂಖ್ಯೆ ಮೊಬೈಲ್ ನಂಬರ್ ಗೆ ನಮೂದಿಸುವ ಮೊದಲು ಸೊನ್ನೆ ಸೇರಿಸಬೇಕು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಶಿಫಾರಸು ಮಾಡಿತ್ತು. ಹೀಗಾಗಿ ಸ್ಥಿರ ದೂರವಾಣಿಯಿಂದ ಮೊಬೈಲ್ ಗೆ ಕರೆ ಮಾಡುವ ಮೊದಲು 0 ಒತ್ತುವ ಕ್ರಮ ಜನವರಿ 15 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.