
ಬೆಂಗಳೂರು: ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಹದ್ದು ಬಸ್ತು ಅರ್ಜಿ ಶುಲ್ಕ ಇಳಿಕೆ ಮಾಡಿದೆ. 1500 ರೂ. ಇದ್ದ ಹದ್ದುಬಸ್ತು ಅರ್ಜಿ ಶುಲ್ಕವನ್ನು 500 ರೂಪಾಯಿಗೆ ಇಳಿಕೆ ಮಾಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಸರ್ವೇ ಕಾರ್ಯಕ್ಕೆ 35 ರೂಪಾಯಿ ಇದ್ದ ಶುಲ್ಕವನ್ನು ಭಾರಿ ಹೆಚ್ಚಳ ಮಾಡಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶೇಕಡ 50ರಷ್ಟು ಕಡಿಮೆ ಮಾಡಲಾಗಿದೆ.
ಕಂದಾಯ ಇಲಾಖೆ ಈ ಕುರಿತಾಗಿ ಆದೇಶ ಹೊರಡಿಸಿದ್ದು ಹದ್ದುಬಸ್ತು ಅರ್ಜಿ ಶುಲ್ಕವನ್ನು ಇಳಿಕೆ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆವರೆಗೆ ಪ್ರತಿ ಸರ್ವೆ ನಂಬರ್ ಗೆ 35 ಅರ್ಜಿ ಶುಲ್ಕ ಇದ್ದು, ಅದನ್ನು 1500 ಏರಿಕೆ ಮಾಡಲಾಗಿತ್ತು. ಎರಡು ಎಕರೆ ಮೇಲ್ಪಟ್ಟ ಜಮೀನಿಗೆ ಪ್ರತಿ ಎಕರೆಗೆ 300 ರೂಪಾಯಿ ಜುವರಿ ಶುಲ್ಕ ವಿಧಿಸಲಾಗಿತ್ತು.
ನಗರ ಪ್ರದೇಶದಲ್ಲಿ ಎರಡು ಎಕರೆವರೆಗೆ 2000 ರೂ. ಎರಡು ಎಕರೆ ಮೇಲ್ಪಟ್ಟು ಪ್ರತಿ ಎಕರೆಗೆ 400 ಹೆಚ್ಚುವರಿ ಶುಲ್ಕ ನಿಗದಿ ಮಾಡಿದ್ದು, ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಶುಲ್ಕ ಇಳಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.