ಮುಂಬೈ: ಹಣಕಾಸು ಆಕ್ರಮ ನಿಯಂತ್ರಣದ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ನಿಯಮ ರೂಪಿಸಿದ್ದು, ಬೇನಾಮಿ ಖಾತೆಗಳು, ನಕಲಿ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ತಡೆಗೆ ಮುಂದಾಗಿದೆ. ಇದರಿಂದಾಗಿ ಬ್ಯಾಂಕ್ ಖಾತೆದಾರು ಪೂರ್ಣ ಕೆವೈಸಿ ವಿವರ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.
ಬ್ಯಾಂಕ್ ಖಾತೆಗಳ ಕೆವೈಸಿ ನಿಯಮ ಪಾಲಿಸದ ಗ್ರಾಹಕರ ಖಾತೆಗಳನ್ನು ನಿಷ್ಕ್ರಿಯಗೊಳಿಸುವ ನಿಯಮ ಜನವರಿ 1 ರಿಂದಲೇ ಜಾರಿಗೆ ಬರಲಿದ್ದು, ಲಕ್ಷಾಂತರ ಬ್ಯಾಂಕ್ ಖಾತೆಗಳು ಕೆವೈಸಿ ನಿಯಮ ಪಾಲಿಸಿಲ್ಲ. ಇಂತಹ ಖಾತೆಗಳನ್ನು ರದ್ದು ಮಾಡಲಾಗುವುದು ಎಂದು ಹೇಳಲಾಗಿದೆ.
ಬ್ಯಾಂಕ್ ಖಾತೆದಾರರು ಕೆವೈಸಿ ಮಾಡಿಸಬೇಕಿದೆ. ತಮ್ಮ ಪಾನ್ ಕಾರ್ಡ್, ಆಧಾರ್ ಕಾರ್ಡ್ ಸಂಖ್ಯೆ ಮೊದಲಾದ ವಿವರಗಳನ್ನು ಬ್ಯಾಂಕಿಗೆ ನೀಡಬೇಕಿದೆ. ಕೆವೈಸಿ ಮಾಡಿಸದ ಖಾತೆದಾರರು ತಮ್ಮ ಸಮೀಪದ ಬ್ಯಾಂಕುಗಳಿಗೆ ತೆರಳಿ ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ.
ಕೆಲವರು ಕೆವೈಸಿ ನೆಪದಲ್ಲಿ ಎಟಿಎಂ ಪಿನ್, ಪಾಸ್ವರ್ಡ್, ಸಿವಿವಿ ಸಂಖ್ಯೆಗಳನ್ನು ಪಡೆದು ವಂಚಿಸಿರುವ ಪ್ರಕರಣಗಳು ನಡೆಯುತ್ತಿದ್ದು, ಇದರ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸಬೇಕಿದೆ. ಸಾಮಾನ್ಯ ಉಳಿತಾಯ ಖಾತೆ ಹೊಂದಿದ ಗ್ರಾಹಕರು 10 ವರ್ಷಕ್ಕೆ ಒಮ್ಮೆ ಕೆವೈಸಿ ಅಪ್ಡೇಟ್ ಮಾಡಬೇಕು ಎಂದು ಹೇಳಲಾಗಿದೆ.