ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ಸಿಬ್ಬಂದಿ ನಡೆಸಿದ ಮುಷ್ಕರದಿಂದಾಗಿ ಸುಮಾರು 58 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎನ್ನಲಾಗಿದೆ.
4 ಸಾರಿಗೆ ನಿಗಮಗಳಲ್ಲಿ 1.30 ಲಕ್ಷ ಸಿಬ್ಬಂದಿ ಇದ್ದಾರೆ. ಪ್ರತಿದಿನ 6000 ಕೆಎಸ್ಆರ್ಟಿಸಿ ಬಸ್ ಗಳು ಸಂಚರಿಸುತ್ತವೆ. ಪ್ರತಿದಿನ ಸುಮಾರು 7 ಕೋಟಿ ರೂ. ಸಂಗ್ರಹವಾಗುತ್ತದೆ. ಮುಷ್ಕರದಿಂದ ಕೆಎಸ್ಆರ್ಟಿಸಿ ಗೆ ಅಂದಾಜು 20 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ.
ಅದೇ ರೀತಿ, ಪ್ರತಿದಿನ ಬಿಎಂಟಿಸಿಯ ಸುಮಾರು 5000 ಬಸ್ ಗಳು ಸಂಚರಿಸಲಿದ್ದು, ಪ್ರತಿದಿನ 2.10 ಕೋಟಿ ರೂ.ನಷ್ಟು ಕಲೆಕ್ಷನ್ ಆಗುತ್ತದೆ. 4 ದಿನದ ಮುಷ್ಕರದಿಂದ ಅಂದಾಜು 7 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
NEKRTC ಯ 3775 ಬಸ್ ಗಳು ಪ್ರತಿದಿನ ಸಂಚರಿಸಲಿದ್ದು, ಪ್ರತಿದಿನದ ಕಲೆಕ್ಷನ್ ಸುಮಾರು 4 ಕೋಟಿ ರೂಪಾಯಿಯಷ್ಟು ಆಗುತ್ತದೆ. ಮುಷ್ಕರದಿಂದ ಸುಮಾರು 12 ಕೋಟಿ ರೂ.ನಷ್ಟವಾಗಿದೆ.
NWKRTC ಯ 3402 ಬಸ್ ಗಳು ದಿನ ಸಂಚರಿಸಲಿದ್ದು, ಪ್ರತಿದಿನ ಸುಮಾರು 4.20 ಕೋಟಿ ರೂ. ಕಲೆಕ್ಷನ್ ಆಗುತ್ತದೆ. ಮುಷ್ಕರದ ಕಾರಣ ಸುಮಾರು 14.5 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.