ಖಾಸಗಿ ವಲಯದ ಕೊಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಗೃಹ ಸಾಲದ ಬಡ್ಡಿದರಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ಗೃಹ ಸಾಲದ ದರವನ್ನು ಶೇಕಡಾ 0.10 ರಷ್ಟು ಕಡಿಮೆ ಮಾಡುವುದಾಗಿ ಕೊಟಕ್ ಮಹೀಂದ್ರಾ ಬ್ಯಾಂಕ್ ಹೇಳಿದೆ. ಆದ್ರೆ ಇದು ಸೀಮಿತ ಸಮಯದವರೆಗೆ ಲಭ್ಯವಿರಲಿದೆ. ಅಂದ್ರೆ ಅಗ್ಗದ ಗೃಹ ಸಾಲ ಸೌಲಭ್ಯ ಗ್ರಾಹಕರಿಗೆ ಮಾರ್ಚ್ 31ರವರೆಗೆ ಮಾತ್ರ ಲಭ್ಯವಾಗಲಿದೆ.
ಮಾರ್ಚ್ 31ರವರೆಗೆ ಕೊಟಕ್ ಮಹೀಂದ್ರಾ ಬ್ಯಾಂಕ್ ಗೃಹ ಸಾಲವನ್ನು ಶೇಕಡಾ 6.65 ದರದಲ್ಲಿ ನೀಡಲಿದೆ. ಮನೆ ಖರೀದಿಗೆ ಇದು ಉತ್ತಮ ಸಮಯವೆಂದು ಕೊಟಕ್ ಮಹೀಂದ್ರಾ ಬ್ಯಾಂಕ್ ಹೇಳಿದೆ. ಈ ಬ್ಯಾಂಕಿನಲ್ಲಿ ಅತಿ ಕಡಿಮೆ ಗೃಹ ಸಾಲ ದರವು ವಾರ್ಷಿಕ ಶೇಕಡಾ 6.65 ರಷ್ಟಿದೆ. ಈ ಬಡ್ಡಿದರ ಸಂಬಳ ಮತ್ತು ಸಂಬಳ ರಹಿತ ಗ್ರಾಹಕರಿಗೆ ಅನ್ವಯವಾಗುತ್ತದೆ.
ಅಣ್ಣನ ಪ್ರೀತಿಯ ಬಲೆಗೆ ಬಿದ್ದ ಅಪ್ರಾಪ್ತೆ: ದುಡುಕಿನ ನಿರ್ಧಾರ ಕೈಗೊಂಡ ಜೋಡಿ
ಕೆಲ ದಿನಗಳ ಹಿಂದೆ ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಗೃಹ ಸಾಲ ಬಡ್ಡಿದರಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಎಸ್ಬಿಐಗಿಂತ ಕೊಟಕ್ ಬ್ಯಾಂಕ್ ಬಡ್ಡಿ ದರ ಅಗ್ಗವಾಗಿದೆ. ಎಸ್‌ಬಿಐ ಗೃಹ ಸಾಲದ ದರ ಶೇಕಡಾ 6.70ರಷ್ಟಿದೆ. ಕೋಟಕ್ ಮಹೀಂದ್ರಾ ಬ್ಯಾಂಕಿನಿಂದ ಹೊಸ ದರದಲ್ಲಿ 20 ವರ್ಷಗಳ ಅವಧಿಗೆ 30 ಲಕ್ಷ ರೂಪಾಯಿಗಳ ಸಾಲ ತೆಗೆದುಕೊಂಡರೆ, ಒಟ್ಟು 24,31,898 ರೂಪಾಯಿ ಬಡ್ಡಿಯಾಗಿ ಪಾವತಿಸಬೇಕಾಗುತ್ತದೆ. ಈ ಮೊತ್ತವನ್ನು 20 ವರ್ಷಗಳ ಕಾಲ ಇಎಂಐ ರೂಪದಲ್ಲಿ ನೀಡಬೇಕು. 22,633 ರೂಪಾಯಿಗಳನ್ನು ಇಎಂಐ ಆಗಿ ಪಾವತಿಸಬೇಕಾಗುತ್ತದೆ.