ಭಾರತದಲ್ಲಿರುವ ಟ್ವಿಟರ್ ಪ್ರತಿಸ್ಪರ್ಧಿ ಮೈಕ್ರೋಬ್ಲಾಗಿಂಗ್ ಸೈಟ್ ಕೂ, ಟೈಗರ್ ಗ್ಲೋಬಲ್ ನಾಯಕತ್ವದಲ್ಲಿ ಸರಣಿ ಬಿ ಫಂಡಿಂಗ್ ಅಡಿಯಲ್ಲಿ 30 ಮಿಲಿಯನ್ ಹಣವನ್ನು ಸಂಗ್ರಹಿಸಿದೆ. ಕೂ ಸುಮಾರು 6 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಕಳೆದ ವಾರ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದೇನೆ, ಗೌಪ್ಯತೆ ನೀತಿ, ಬಳಕೆಯ ನಿಯಮಗಳು ಮತ್ತು ಸಮುದಾಯ ಮಾರ್ಗಸೂಚಿಗಳು ಈಗ ಹೊಸ ನಿಯಮಗಳಿಗೆ ಅನುಗುಣವಾಗಿರುತ್ತವೆ ಎಂದು ಕೂ ಹೇಳಿತ್ತು.
ಕೂ ಸಹ-ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ ನಮ್ಮಲ್ಲಿ ಯೋಜನೆಗಳಿವೆ. ಅವುಗಳನ್ನು ಜಾರಿಗೆ ತರುವ ಮೂಲಕ ಮುಂದಿನ ವರ್ಷದ ವೇಳೆಗೆ ಸಾಮಾಜಿಕ ಜಾಲತಾಣದ ಪ್ರಸಿದ್ಧ ವೇದಿಕೆಯಲ್ಲಿ ಒಂದಾಗುತ್ತೇವೆ ಎಂದಿದ್ದಾರೆ. ಈ ಕನಸು ಈಡೇರಿಸಲು ಟೈಗರ್ ಗ್ಲೋಬಲ್ ಸಹಕಾರ ನೀಡಲಿದೆ ಎಂದವರು ಹೇಳಿದ್ದಾರೆ.
ಈ ಅಪ್ಲಿಕೇಶನ್ ಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 4.5 ಪಾಯಿಂಟ್‌ಗಳ ರೇಟಿಂಗ್ ಸಿಕ್ಕಿದೆ. ಕೂ ಅಪ್ಲಿಕೇಷನನ್ನು ಪ್ರಸ್ತುತ ಬಾಲಿವುಡ್ ಹಿರಿಯ ನಟರಾದ ಅನುಪಮ್ ಖೇರ್, ಕಂಗನಾ ರನೌತ್, ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್ ಮತ್ತು ಸ್ಮೃತಿ ಇರಾನಿ, ಕಾಂಗ್ರೆಸ್ ಹಿರಿಯ ನಾಯಕರಾದ ಕಮಲ್ ನಾಥ್, ಜೆಡಿಎಸ್ ಮುಖ್ಯಸ್ಥರು ಮತ್ತು ಮಾಜಿ ಪ್ರಧಾನಿ ದೇವೇಗೌಡ, ಎನ್‌ಸಿಪಿಯ ಸುಪ್ರಿಯಾ ಸುಲೇ ಮತ್ತು ಚಂದ್ರಶೇಖರ್ ಆಜಾದ್ ಬಳಸುತ್ತಿದ್ದಾರೆ.