ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಟೋ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಗಮನ ನೀಡ್ತಿವೆ. ದೆಹಲಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಕೋಮಕಿ ಹೊಸ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ತರ್ತಿದೆ. ಕೋಮಕಿ ಸೇ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿರುವ 125 ಸಿಸಿ ಪೆಟ್ರೋಲ್ ಸ್ಕೂಟರ್ ಗೆ ಸ್ಪರ್ಧೆ ನೀಡಲಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಗೆ, 3ಕೆಡಬ್ಲ್ಯು ಬಿಎಲ್ ಡಿಸಿ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ. ಡಿಟ್ಯಾಚೇಬಲ್ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಕಂಪನಿಯ ಪ್ರಕಾರ, ಸಿಂಗಲ್ ಚಾರ್ಜ್‌ನಲ್ಲಿ ಈ ಸ್ಕೂಟರ್ 100 ರಿಂದ 125 ಕಿ.ಮೀಟರ್ ಚಲಿಸಲಿದೆ. ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 1.5 ಯುನಿಟ್ ವಿದ್ಯುತ್ ಬೇಕೆಂದು ಕಂಪನಿ ಹೇಳಿದೆ.
BIG NEWS: ವಾಹನ ಸವಾರರ ಗಮನಕ್ಕೆ- ಇಂದು ಮಧ್ಯರಾತ್ರಿಯಿಂದಲೇ ಫಾಸ್ಟ್ ಟ್ಯಾಗ್ ಕಡ್ಡಾಯ
ಈ ಸ್ಕೂಟರ್ 85 ಕಿಲೋಮೀಟರ್ ಪ್ರತಿ ಗಂಟೆಗ ಚಲಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್ ನಾಲ್ಕು ಬಣ್ಣದಲ್ಲಿ ಲಭ್ಯವಿದೆ. ಕೋಮಕಿ ಸಿ ಸ್ಕೂಟರ್ ಮುಂಭಾಗದಲ್ಲಿ ಸಾಕಷ್ಟು ಜಾಗವನ್ನು ನೀಡಲಾಗಿದೆ. ಅಲ್ಲದೆ ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಕೂಡ ನೀಡಲಾಗಿದೆ. ಸ್ಕೂಟರ್ ಆಕರ್ಷಕವಾಗಿದ್ದು, ಐಪ್ರೆಜ್ ಪ್ಲಸ್, ಬೀಗೊಸ್ ಬಿ8, ಒಡಿಸ್ಸಿ ಹಾಕ್ ಲೈಟ್ ಸ್ಕೂಟರ್ ಗೆ ಇದು ಟಕ್ಕರ್ ನೀಡಲಿದೆ.