ಇಮ್ರಾನ್ ಶೇಖ್ ಎಂಬ 19 ವರ್ಷದ ಯುವಕ ತನ್ನ ಬೈಸಿಕಲ್ನಲ್ಲಿ ಪ್ರತಿದಿನ 120 ಕಿಲೋಮೀಟರ್ ದೂರ ಕ್ರಮಿಸಿ ಸಿಹಿತಿಂಡಿಗಳನ್ನ ಮಾರಾಟ ಮಾಡುವ ಮೂಲಕ ತನ್ನ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಕೊರೊನಾದಿಂದಾಗಿ ಸ್ಥಳೀಯ ರೈಲುಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಈ ಯುವಕ ನಿತ್ಯ ನಾಡಿಯಾ ಜಿಲ್ಲೆಯಿಂದ ಕೋಲ್ಕತ್ತಾ ನಗರಕ್ಕೆ ಸೈಕಲ್ನಲ್ಲೇ ಪ್ರಯಾಣ ಮಾಡುತ್ತಿದ್ದಾನೆ. 120 ಕಿಲೋಮೀಟರ್ ದೂರ ಕ್ರಮಿಸಲು ಇಮ್ರಾನ್ 8 ಗಂಟೆಗಳ ಅವಧಿ ತೆಗೆದುಕೊಳ್ತಾರಂತೆ.
ನಾಡಿಯಾ ಜಿಲ್ಲೆ ಸಿಹಿತಿಂಡಿಗಳಿಗೆ ಹೆಸರುವಾಸಿ. ಲಾಕ್ ಸಮಯದಲ್ಲಿ ಮನೆಯಲ್ಲೇ ಇದ್ದ ಇಮ್ರಾನ್ ಲಾಕ್ಡೌನ್ ಅವಧಿ ಮುಗಿಯುತ್ತಿದ್ದಂತೆಯೇ ತಮ್ಮವ್ಯವಹಾರಗಳನ್ನ ಪುನಾರಂಭಿಸಿದ್ದಾರಂತೆ. ರೈಲಿನ ವ್ಯವಸ್ಥೆ ಇಲ್ಲದ ಕಾರಣ ಸೈಕಲ್ ಸವಾರಿ ಮಾಡೋದು ಅನಿವಾರ್ಯವಾಯ್ತು ಅಂತಾರೆ ಯುವಕ ಇಮ್ರಾನ್ ಶೇಖ್. ಮುಂಜಾನೆ 3 ಗಂಟೆ ಸುಮಾರಿಗೆ ನಾಡಿಯಾದಿಂದ ಹೊರಡುವ ಇಮ್ರಾನ್ ಬೆಳಗ್ಗೆ 7 ಗಂಟೆ ಸುಮಾರಿಗೆ ಕೊಲ್ಕತ್ತಾ ತಲುಪುತ್ತಾರಂತೆ.