alex Certify ಕೊರೋನಾ ಲಸಿಕೆ ಕುರಿತಂತೆ ಮುಖ್ಯ ಮಾಹಿತಿ, ವ್ಯಾಕ್ಸಿನ್ ಪಡೆದವರಿಗೆ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಲಸಿಕೆ ಕುರಿತಂತೆ ಮುಖ್ಯ ಮಾಹಿತಿ, ವ್ಯಾಕ್ಸಿನ್ ಪಡೆದವರಿಗೆ ಮಹತ್ವದ ಸೂಚನೆ

ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು, ಲಸಿಕೆ ಹಾಕಿಸಿಕೊಳ್ಳುವವರಲ್ಲಿ ಸಾಕಷ್ಟು ಭಯವಿದೆ. ಕೊರೊನಾ ಲಸಿಕೆ ಹಾಕಿದ ನಂತರ ಏನು ಮಾಡಬೇಕು? ಏನು ಮಾಡಬಾರದು ಎಂಬ ಪ್ರಶ್ನೆಗಳೂ ಇವೆ.

ಕೊರೊನಾ ಲಸಿಕೆ ಪಡೆದವರು, ಲಸಿಕೆ ಪಡೆದವರ ಜೊತೆಗಿದ್ದರೆ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಆದ್ರೆ ಬೇರೆ ವ್ಯಕ್ತಿಗಳ ಜೊತೆ, ಸಾರ್ವಜನಿಕ ಪ್ರದೇಶದಲ್ಲಿರುವಾಗ ಮಾಸ್ಕ್ ಧರಿಸಬೇಕಾಗುತ್ತದೆ.

ಕೊರೊನಾ ಪಾಸಿಟಿವ್ ಬಂದ ವ್ಯಕ್ತಿ ಜೊತೆಗಿದ್ದರೆ ನೀವು ಕ್ವಾರಂಟೈನ್ ಆಗಬೇಕಿಲ್ಲ. ಆದರೆ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಕ್ವಾರಂಟೈನ್ ಆಗುವ ಜೊತೆಗೆ ಕೊರೊನಾ ಪರೀಕ್ಷೆ ಮಾಡಿಸಬೇಕಾಗುತ್ತದೆ.

ಲಸಿಕೆ ನೀಡಿದ ವ್ಯಕ್ತಿಗೆ ಸಾರ್ವಜನಿಕ ಪ್ರದೇಶ, ರೆಸ್ಟೋರೆಂಟ್ ಗಳಲ್ಲಿ ಸೋಂಕು ಹರಡುವ ಸಾಧ್ಯತೆ ಕಡಿಮೆ. ಆದರೆ ಲಸಿಕೆ ಹಾಕಲಾಗಿದೆ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಲಸಿಕೆ ಹಾಕಿದ ನಂತರವೂ ಪ್ರವಾಸ ಮಾಡುವುದು ಅಪಾಯಕಾರಿ. ಸಣ್ಣ ಪ್ರವಾಸ ಕೈಗೊಳ್ಳಬಹುದು. ಆದರೆ ವಿದೇಶಿ ಪ್ರವಾಸ ಒಳ್ಳೆಯದಲ್ಲ.

ಜೊತೆಗೆ ಲಸಿಕೆ ಹಾಕಿದ್ದರೂ ಸಾರ್ವಜನಿಕ ಸಮಾರಂಭಗಳಿಂದ ಹೊರಗಿರುವುದು ಒಳ್ಳೆಯದು. ಎಲ್ಲ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಮುಂದುವರಿಸಬೇಕು. ಕೊರೊನಾ ಲಸಿಕೆ ನಿಮ್ಮನ್ನು ಸಂಪೂರ್ಣವಾಗಿ ರಕ್ಷಿಸಬಲ್ಲದೆ ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಲಸಿಕೆ ಪಡೆದಿದ್ದ ಕೆಲವರಲ್ಲಿ ಅಡ್ಡ ಪರಿಣಾಮ ಬೀರಿದ್ದ ಕಾರಣ ಇದ್ರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯುತ್ತಿದೆ. ಪರೀಕ್ಷೆ ಪೂರ್ಣಗೊಂಡ ನಂತರ ಸರಿಯಾದ ಉತ್ತರ ಸಿಗಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...