ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ, ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ನೀಡುತ್ತದೆ. ಪ್ರತಿ ನಾಗರಿಕರಿಗೆ 12-ಅಂಕಿಯ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಸರ್ಕಾರ ಸೇರಿದಂತೆ ಖಾಸಗಿ ಸೇವೆಗಳನ್ನು ಪಡೆಯಲು ಆಧಾರ್ ಅನಿವಾರ್ಯವಾಗಿದೆ. ಆನ್‌ಲೈನ್ ಮೂಲಕ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗುವ ಮೂಲಕ ಆಧಾರ್ ಕಾರ್ಡ್ ನವೀಕರಿಸಬಹುದು. ಬೇರೆ ಬೇರೆ ಸೇವೆಗೆ ಬೇರೆ ಬೇರೆ ಶುಲ್ಕವನ್ನು ನಿಗಧಿಪಡಿಸಲಾಗಿದೆ.
ಆಧಾರ್‌ನ ಬಯೋಮೆಟ್ರಿಕ್ ನವೀಕರಣಗಳಿಗಾಗಿ ಹತ್ತಿರದ ದಾಖಲಾತಿ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಎಲ್ಲಾ ನವೀಕರಣಗಳನ್ನು ಈಗ ಆನ್‌ಲೈನ್ ಮಾಧ್ಯಮದಲ್ಲಿಯೇ ಮಾಡಲಾಗುತ್ತದೆ. ಬಯೋಮೆಟ್ರಿಕ್ ನವೀಕರಣಗಳನ್ನು ಮಾಡಿದರೆ, 100 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇ-ಆಧಾರ್ ಡೌನ್‌ಲೋಡ್ ಮತ್ತು ಬಣ್ಣ ಮುದ್ರಣಕ್ಕೆ 30 ರೂಪಾಯಿಗಳನ್ನು ಪಾವತಿಸಬೇಕು. ಹೆಚ್ಚಿನ ಹಣ ಪಾವತಿಸುವಂತೆ ಆಧಾರ್ ಕೇಂದ್ರದಲ್ಲಿ ಕೇಳಿದ್ರೆ 1947 ಗೆ ಕರೆ ಮಾಡಿ, ದೂರು ನೀಡಬೇಕು. help@uidai.gov.in ಗೆ ಇಮೇಲ್ ಮಾಡುವ ಮೂಲಕವೂ ದೂರು ನೀಡಬಹುದು.
ಆಧಾರ್ ಕಾರ್ಡ್ ನವೀಕರಿಸಲುವ ಮೂಲ ದಾಖಲೆಗಳನ್ನು ದಾಖಲಾತಿ ಕೇಂದ್ರಕ್ಕೆ ನೀಡಬೇಕು. ಮೂಲ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ನವೀಕರಿಸಿದ ನಂತರ ಹಿಂತಿರುಗಿಸಲಾಗುತ್ತದೆ. ಮೊಬೈಲ್ ಸಂಖ್ಯೆ ಬದಲಾಗಿದ್ದರೆ ಆಧಾರ್ ನಲ್ಲಿ ನವೀಕರಿಸಬೇಕು. ವಿಳಾಸ ಬದಲಾಗಿದ್ದರೆ ಅದನ್ನು ನವೀಕರಿಸಬೇಕು. ಆಧಾರ್ ಕಾರ್ಡ್‌ನಲ್ಲಿ ಫೋಟೋ, ಬಯೋಮೆಟ್ರಿಕ್ಸ್, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ಅನ್ನು ಬದಲಾಯಿಸಲು ಬಯಸಿದರೆ ಯಾವುದೇ ದಾಖಲೆ ಅಗತ್ಯವಿಲ್ಲ.