ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ವಿವಿಧ ಸೇವೆಗಳಿಗೆ ವಿಭಿನ್ನ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಅಂಚೆ ಕಚೇರಿಯ ಉಳಿತಾಯ ಯೋಜನೆ ಉತ್ತಮ ಹಾಗೂ ಸುರಕ್ಷಿತ ಹೂಡಿಕೆಯಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಅಂಚೆ ಕಚೇರಿ ಉಳಿತಾಯ ಯೋಜನೆಯಲ್ಲಿ ಹಣ ಹೂಡುತ್ತಾರೆ. ಆದರೆ ಅಂಚೆ ಕಚೇರಿ ಉಳಿತಾಯ ಯೋಜನೆಯಲ್ಲೂ ಕೆಲವು ಸೇವಾ ಶುಲ್ಕಗಳನ್ನು ನೀಡಬೇಕು. ಹೊಸ ಚೆಕ್‌ಬುಕ್, ಖಾತೆಯ ವರ್ಗಾವಣೆ ಸೇರಿದಂತೆ ಅನೇಕ ಸೇವೆಗಳು ಸೇರಿವೆ.
ನಕಲಿ ಪಾಸ್ ಪುಸ್ತಕ ಪಡೆಯಲು 50 ರೂಪಾಯಿ ಶುಲ್ಕ ಪಾವತಿಸಬೇಕು. ಖಾತೆ ಸ್ಟೇಟ್ಮೆಂಟ್ ಮತ್ತು ಠೇವಣಿ ರಶೀದಿಯನ್ನು ಪಡೆಯಲು 20 ರೂಪಾಯಿ ಪಾವತಿಸಬೇಕು. ಪ್ರಮಾಣಪತ್ರ ಕಳೆದು ಹೋದರೆ ಅಥವಾ ಹಾಳಾದರೆ ಪಾಸ್ ಪುಸ್ತಕ ನೋಂದಣಿಗೆ 10 ರೂಪಾಯಿ ನೀಡಬೇಕು. ನಾಮಿನೇಷನ್ ರದ್ದುಗೊಳಿಸಲು ಅಥವಾ ಬದಲಾಯಿಸಲು 50 ರೂಪಾಯಿಗಳನ್ನು ನೀಡಬೇಕು.
ಖಾತೆಯನ್ನು ವರ್ಗಾಯಿಸಲು 100 ರೂಪಾಯಿ ಶುಲ್ಕ ವಿಧಿಸಬೇಕು. ಉಳಿತಾಯ ಖಾತೆಯಲ್ಲಿ 10 ಚೆಕ್ ಬುಕ್ ನಂತ್ರ ಪ್ರತಿ ಚೆಕ್ ಬುಕ್ ಗೆ 2 ರೂಪಾಯಿ ನೀಡಬೇಕು. ಚೆಕ್ ಬೌನ್ಸ್ ಆದಲ್ಲಿ 100 ರೂಪಾಯಿ ಶುಲ್ಕ ಪಾವತಿಸಬೇಕು.