ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಲಿಂಗ, ವಿಳಾಸ, ಜನ್ಮ ದಿನಾಂಕ, ಮೊಬೈಲ್ ನಂಬರ್, ಇ-ಮೇಲ್ ಐಡಿಯಲ್ಲೇನಾದ್ರೂ ತಪ್ಪುಗಳಿದ್ರೆ ಅದನ್ನು ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಿ ಬೆರಳಚ್ಚು ನೀಡಿ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಸರಿಪಡಿಸಿಕೊಳ್ಳಬಹುದು.
ವಿಳಾಸ ಬದಲಾವಣೆಯನ್ನು ಕೂಡ ಮಾಡಿಕೊಳ್ಳಬಹುದು. ಆದರೆ ನೀವು ನೀಡಿರುವ ಮೊಬೈಲ್ ನಂಬರ್ ಬಹಳ ಮುಖ್ಯವಾಗುತ್ತದೆ.
ಮೊಬೈಲ್ ಹಾಗೂ ಇ ಮೇಲ್ ಐಡಿಯನ್ನು ಕೊಟ್ಟರೆ ಅನುಕೂಲ. ಇದು ರೇಷನ್ ಕಾರ್ಡ್ ಮಾಡಿಸಿಕೊಳ್ಳುವುದು ಸೇರಿದಂತೆ ವಿವಿಧ ಸೇವೆ ಪಡೆದುಕೊಳ್ಳಲು ಅನುಕೂಲವಾಗುತ್ತದೆ.
ʼಆಧಾರ್ʼ ಇಂದು ಬಹುತೇಕ ಸರ್ಕಾರಿ ಸೇವೆಗಳನ್ನು ಪಡೆದುಕೊಳ್ಳಲು ಅನಿವಾರ್ಯವಾಗಿರುವ ಕಾರಣ ಇದರಲ್ಲಿ ಯಾವುದೇ ತಪ್ಪಿಲ್ಲದಂತೆ ಗಮನಿಸುವುದು ಸೂಕ್ತ. ಆಧಾರ್ ಕೇಂದ್ರಗಳಿಗೆ ಮಾಹಿತಿ ಅಪ್ ಡೇಟ್ ಮಾಡಿಸಲು ತೆರಳಿದ ವೇಳೆ ಪ್ರಕ್ರಿಯೆಗಳು ಮುಗಿದ ಬಳಿಕ ಅಪ್ ಡೇಟ್ ಪ್ರತಿಯನ್ನು ತಪ್ಪದೆ ಪಡೆದು ಆನ್ ಲೈನ್ ಮೂಲಕ ಇದರ ಮಾಹಿತಿಗಳನ್ನು ತಿಳಿಯಬಹುದಾಗಿದೆ.