ಸರ್ಕಾರ ಅನೇಕ ಸಣ್ಣ ಉಳಿತಾಯ ಯೋಜನೆಗಳನ್ನು ನೀಡ್ತಿದೆ. ಪ್ರತಿ ತ್ರೈಮಾಸಿಕದಲ್ಲಿ ಈ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಬದಲಾವಣೆ ಮಾಡುತ್ತದೆ. ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಶೇಕಡಾ 4 ರಿಂದ ಶೇಕಡಾ 7.6 ರಷ್ಟು ಬಡ್ಡಿ ಸಿಗುತ್ತದೆ.
ಈ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ, ಹಿರಿಯ ನಾಗರಿಕ ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಸೇರಿವೆ. 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಈ ಯೋಜನೆ ಲಭ್ಯವಿದೆ. ಏಪ್ರಿಲ್ ಒಂದರಿಂದ ಹೊಸ ಬಡ್ಡಿ ದರಗಳು ಅನ್ವಯವಾಗಿವೆ. ಈ ಯೋಜನೆಯಲ್ಲಿ ಶೇಕಡಾ 7.6 ರಷ್ಟು ಬಡ್ಡಿ ಸಿಗುತ್ತದೆ. ಒಬ್ಬ ವ್ಯಕ್ತಿ ತನ್ನ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು. 21 ನೇ ವಯಸ್ಸಿನಲ್ಲಿ ಹೆಣ್ಣುಮಕ್ಕಳು ಈ ಖಾತೆಯಿಂದ ಹಣ ಹಿಂಪಡೆಯಬಹುದು.
ಪಿಪಿಎಫ್ ಅತ್ಯಂತ ಜನಪ್ರಿಯ ತೆರಿಗೆ ಉಳಿತಾಯ ಯೋಜನೆಯಾಗಿದೆ. ಹೂಡಿಕೆ ಮಾಡಿದ 15ನೇ ವರ್ಷಕ್ಕೆ ಹಣವನ್ನು ಹಿಂಪಡೆಯ ಬಹುದು. ಪಿಪಿಎಫ್ ಹೂಡಿಕೆಯು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಇದರಲ್ಲಿ ಕನಿಷ್ಠ 500 ರೂಪಾಯಿಗಳಷ್ಟು ಹೂಡಿಕೆ ಮಾಡಬಹುದು. ಶೇಕಡಾ 7.1 ರಷ್ಟು ಬಡ್ಡಿ ಸಿಗ್ತಿದೆ.
ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ 60 ವರ್ಷ ಮೇಲ್ಪಟ್ಟವರು ಹೂಡಿಕೆ ಮಾಡಬಹುದು. 15 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಜಂಟಿಯಾಗಿಯೂ ಹೂಡಿಕೆ ಮಾಡಬಹುದು. ಜಂಟಿಯಾಗಿ 30 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. 5 ವರ್ಷಗಳ ಲಾಕಿನ್ ಇರುತ್ತದೆ. 5 ವರ್ಷಗಳವರೆಗೆ ಹಣ ಹಿಂಪಡೆಯಲು ಸಾಧ್ಯವಿಲ್ಲ. ಶೇಕಡಾ 7.4 ರಷ್ಟು ಬಡ್ಡಿ ಸಿಗುತ್ತದೆ.
ಕಿಸಾನ್ ವಿಕಾಸ್ ಪತ್ರದಲ್ಲಿ ಕನಿಷ್ಠ 1000 ರೂಪಾಯಿಗಳೊಂದಿಗೆ ಖಾತೆ ತೆರೆಯಬಹುದು. ವಾರ್ಷಿಕ ಶೇಕಡಾ 6.9 ರಷ್ಟು ಬಡ್ಡಿ ಸಿಗುತ್ತದೆ. ಹೂಡಿಕೆ ಮಾಡಿದ ಹಣ 10 ವರ್ಷ 4 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ.