ಹಾಸನ: ರೈತರಿಂದ ನೇರವಾಗಿ ಕೆಎಂಎಫ್ ಮೂಲಕ ಮೆಕ್ಕೆಜೋಳ ಖರೀದಿ ಬಗ್ಗೆ ನಿರ್ಧರಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ವಾರದೊಳಗೆ ಈ ಕುರಿತು ಆದೇಶ ಹೊರಬೀಳಲಿದೆ. ನಿಗದಿತ ದರದಲ್ಲಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸುವ ಕುರಿತಾಗಿ ಈಗಾಗಲೇ ಕೆಎಂಎಫ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಸಹಕಾರ ಇಲಾಖೆ ಅಧೀನದಲ್ಲಿ ಕೆಎಂಎಫ್ ಇದ್ದರೂ ಅದಕ್ಕೆ ಪ್ರತ್ಯೇಕ ಮಂಡಳಿ, ಅಧ್ಯಕ್ಷರು, ಆಡಳಿತ ಮಂಡಳಿ ಇದೆ. ಅಧಿಕೃತವಾಗಿ ಕೆಎಂಎಫ್ ಮೆಕ್ಕೆಜೋಳ ಖರೀದಿ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಸಹಕಾರ ಸಚಿವನಾಗಿ ನಾನು ಮೆಕ್ಕೆಜೋಳ ಖರೀದಿಸಲು ಕೆಎಂಎಫ್ ಗೆ ಸೂಚನೆ ನೀಡಿದ್ದು, ಶೀಘ್ರದಲ್ಲೇ ಖರೀದಿ ಆದೇಶ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.