ಬೆಂಗಳೂರು: ಈಗಾಗಲೇ ಕೆಎಂಎಫ್ ನಂದಿನಿ ಹಾಲು, ಲಸ್ಸಿ, ಮಿಲ್ಕ್ ಶೇಕ್ ಪೆಟ್ ಬಾಟಲ್ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ವಿಮಾನ ಮತ್ತು ರೈಲುಗಳಲ್ಲಿಯೂ ಲಭ್ಯವಾಗುವಂತೆ ಮಾಡಲಾಗಿದೆ.
ವಂದೇ ಭಾರತ್ ರೈಲ್ ನಲ್ಲಿಯೂ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಮುಂದೆ ಆಕಾಶದಲ್ಲಿಯೂ ಕೆಎಂಎಫ್ ನಂದಿನಿ ಉತ್ಪನ್ನಗಳು ಸಿಗಲಿವೆ. ಈ ಮೊದಲು ಅಮುಲ್ ಬಟರ್ ಕಪ್ ಬಳಕೆ ಇತ್ತು. ಈಗ ನಂದಿನಿ ಉತ್ಪನ್ನ ಕೂಡ ಸಿಗಲಿವೆ.
ಬೆಂಗಳೂರಿನಿಂದ ಹೊರಡುವ ವಂದೇ ಭಾರತ್ ರೈಲ್ ನಲ್ಲಿ ಪ್ರತಿದಿನ 7ರಿಂದ 10 ಸಾವಿರದಷ್ಟು ಮಿಲ್ಕ್ ಶೇಕ್ ಪೆಟ್ ಬಾಟಲ್ ಮಾರಾಟವಾಗುತ್ತಿವೆ. ವಂದೇ ಭಾರತ್ ರೈಲ್ ನಲ್ಲಿ ಬೆಳಗಿನ ಉಪಹಾರದಲ್ಲಿ ನಂದಿನಿ ಬೆಣ್ಣೆ, ಲಸ್ಸಿ 200ಮಿ.ಲೀ. ವಿತರಣೆ ಮಾಡಲಾಗುತ್ತಿದೆ. ಇದರೊಂದಿಗೆ ಗುಡ್ ಲೈಫ್ ಸುವಾಸಿತ ಹಾಲು, ಚಾಕೋಲೇಟ್, ಮಿಲ್ಕ್ ಶೇಕ್ ಪೆಟ್ ಬಾಟಲ್ ಗಳನ್ನು ಮಾರಾಟ ಮಾಡಲಾಗುತ್ತಿದೆ.
ವಂದೇ ಭಾರತ್ ರೈಲಿನಲ್ಲಿ ನಂದಿನಿ ಉತ್ಪನ್ನಕ್ಕೆ ಬೇಡಿಕೆ ಶುರುವಾದಂತೆ ನಂದಿನಿ ಬ್ರಾಂಡ್ ವ್ಯಾಲ್ಯೂ ಹೆಚ್ಚಿಸಿಕೊಂಡಿದ್ದು, ಹಳಿಯಿಂದ ಆಗಸದವರೆಗೂ ನಂದಿನಿ ಕಮಾಲ್ ಮಾಡಲಿದೆ. ಸಿಂಗಾಪುರ ಏರ್ ಲೈನ್ಸ್, ಏರ್ ಫ್ರಾನ್ಸ್ ಏರ್ ಲೈನ್ಸ್ ವಿಮಾನ ಕಂಪನಿಗಳು ಕೆಎಂಎಫ್ ಗೆ ಪ್ರಸ್ತಾವನೆ ಸಲ್ಲಿಸಿವೆ.
ಅಂತರರಾಷ್ಟ್ರೀಯ ವಿಮಾನಗಳಲ್ಲಿಯೂ ನಂದಿನಿ ಬ್ರಾಂಡ್ ಸಿಗಲಿದೆ. ಹಳಿಯಿಂದ ಆಗಸದವರೆಗೂ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಬಂದಿದ್ದು, ಅಂತರರಾಷ್ಟ್ರೀಯ ವಿಮಾನಗಳಲ್ಲಿಯೂ ನಂದಿನಿ ಉತ್ಪನ್ನಗಳು ಸಿಗಲಿವೆ ಎಂದು ಹೇಳಲಾಗಿದೆ.