ಬೆಂಗಳೂರು: ಕೆಎಂಎಫ್ ನಂದಿನಿ ಉತ್ಪನ್ನ ಖರೀದಿಸುವ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬೆಣ್ಣೆ, ತುಪ್ಪ ಮತ್ತು ಹಾಲಿನ ಪುಡಿ ದರವನ್ನು ಇಳಿಕೆ ಮಾಡಲಾಗಿದೆ.
ಕರ್ನಾಟಕ ಹಾಲು ಮಹಾಮಂಡಳ ನಿಯಮಿತ ಗ್ರಾಹಕರ ಅನುಕೂಲಕ್ಕಾಗಿ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟದ ದರ ಇಳಿಕೆ ಮಾಡಿದೆ. ತುಪ್ಪದ ದರವನ್ನು ಒಂದು ಕೆಜಿಗೆ 20 ರೂ.ನಷ್ಟು ಕಡಿಮೆ ಮಾಡಲಾಗಿದೆ. ತುಪ್ಪದ ದರ ಕೆಜಿಗೆ 470 ರೂಪಾಯಿಯಿಂದ 450 ರೂಪಾಯಿ ಇಳಿಕೆಯಾಗಿದೆ.
ಅದೇ ರೀತಿ ಬೆಣ್ಣೆ ಮತ್ತು ಹಾಲಿನ ಪುಡಿ ದರವನ್ನು ಕೂಡ ಕಡಿಮೆ ಮಾಡಲಾಗಿದ್ದು, ಗ್ರಾಹಕರು ಪ್ರಯೋಜನ ಪಡೆಯಲು ತಿಳಿಸಲಾಗಿದೆ.