ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೊಂದಾಯಿಸಿದ ರೈತರಿಗೆ ಕೇಂದ್ರ ಸರ್ಕಾರ ವಾರ್ಷಿಕ 6 ಸಾವಿರ ರೂ.ಗಳನ್ನು 3 ಕಂತುಗಳಲ್ಲಿ ನೀಡಲಿದೆ.
ಜೂನ್ 30ರವರೆಗೆ ಯೋಜನೆಗೆ ಹೆಸರು ನೋಂದಾಯಿಸಲು ಅವಕಾಶವಿದೆ. ಹೀಗೆ ನೊಂದಾಯಿಸಿದವರಿಗೆ ಈ ವರ್ಷದ ಉಳಿದ ಎರಡು ಕಂತು 4000 ರೂ.ಗಳನ್ನು ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುವುದು.
ಜೂನ್ 30ರ ಮೊದಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ನೊಂದಾಯಿಸಿದವರಿಗೆ ಜುಲೈನಲ್ಲಿ ಮತ್ತು ಆಗಸ್ಟ್ನಲ್ಲಿ ತಲಾ ಒಂದೊಂದು ಕಂತು ನೀಡಲಾಗುವುದು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕ 6000 ರೂ.ಗಳನ್ನು 3 ಕಂತುಗಳಲ್ಲಿ ಕೇಂದ್ರ ಸರ್ಕಾರ ನೀಡಲಿದೆ. ಅದೇ ರೀತಿ ರಾಜ್ಯ ಸರ್ಕಾರ 2 ಕಂತುಗಳಲ್ಲಿ 4000 ರೂ. ನೀಡಲಿದೆ. ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಪಹಣಿ ನೀಡಿ ನೋಂದಾಯಿಸಬೇಕು ಎಂದು ಹೇಳಲಾಗಿದೆ.