ಕೋಲಾರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ.
ಈಗಾಗಲೇ ಹಲವು ಕಂತುಗಳಲ್ಲಿ ಹಣ ಜಮಾ ಮಾಡಲಾಗಿದ್ದು, ಅನರ್ಹ ರೈತರಿಂದ ಕೃಷಿ ಸಮ್ಮಾನ್ ಯೋಜನೆಯ ಹಣವನ್ನು ವಾಪಸ್ ವಸೂಲಿ ಮಾಡಲಾಗುತ್ತಿದೆ. ಸುಳ್ಳು ಮಾಹಿತಿ ನೀಡಿ ಯೋಜನೆಯ ಹಣ ಪಡೆದುಕೊಂಡವರು ವಾಪಸ್ ಕಟ್ಟಬೇಕಿದೆ.
ಈಗಾಗಲೇ ನೂರಾರು ರೈತರಿಂದ ಹಣ ವಾಪಸ್ ಪಡೆಯುವ ಪ್ರಕ್ರಿಯೆ ನಡೆದಿದೆ. ಅನೇಕ ರೈತರು ಸ್ವಯಂ ಪ್ರೇರಿತರಾಗಿ ಹಣ ಮರಳಿಸಿದ್ದಾರೆ. ಇನ್ನು ಕೆಲವರು ಹಣ ವಾಪಸ್ ಮರಳಿಸಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ವಾರ್ಷಿಕ ಮೂರು ಕಂತುಗಳಲ್ಲಿ 6000 ರೂ. ರೈತರ ಖಾತೆಗೆ ಜಮಾ ಮಾಡಿದೆ. ಮಾನದಂಡಗಳನ್ನು ಮೀರಿ ಯೋಜನೆಯ ಸೌಲಭ್ಯ ಪಡೆದ ರೈತರ ಮಾಹಿತಿಯನ್ನು ಕೇಂದ್ರ ಸರ್ಕಾರ ಸಂಗ್ರಹಿಸಿದ್ದು, ಅಂತಹ ರೈತರ ಸಹಾಯಧನ ವಾಪಸ್ ಕೊಡುವಂತೆ ನೋಟಿಸ್ ನೀಡಲಾಗುತ್ತಿದೆ.