ನವದೆಹಲಿ: ಪ್ರಸಿದ್ದ ಕಾರು ಕಂಪೆನಿ ಕಿಯಾ ಇಂಡಿಯಾ ಭಾರತೀಯ ಎಲೆಕ್ಟ್ರಾನಿಕ್ ವಾಹನಗಳ ಮಾರುಕಟ್ಟೆಗೆ ‘EV6’ ಎಂಬ ಹೊಸ ಬ್ರಾಂಡ್ ನೊಂದಿಗೆ ಮೊದಲ ಹೆಜ್ಜೆ ಇಟ್ಟಿದೆ. ‘EV6’ ಕಿಯಾದ ಮೊದಲ ಬಿಇವಿ (ಬ್ಯಾಟರಿ ಎಲೆಕ್ಟ್ರಿಕ್ ವಾಹನ) ಆಗಿದೆ.
ಮಾರ್ಚ್ 2021ರಲ್ಲಿ ಜಾಗತಿಕವಾಗಿ ಅನಾವರಣಗೊಂಡ ಇದು ಅದರ ವಿನ್ಯಾಸ, ಗುಣಮಟ್ಟ ಮತ್ತು ವೈಶಿಷ್ಟ್ಯಗಳಿಗಾಗಿ ಜಾಗತಿಕವಾಗಿ ಮೆಚ್ಚುಗೆ ಪಡೆದುಕೊಂಡಿದೆ. ಈ ವಾಹನವನ್ನು ಕಿಯಾದ ಹೊಸ ಇವಿ ಪ್ಲಾಟ್‌ಫಾರ್ಮ್ ‘E-GMP’ ನಲ್ಲಿ ನಿರ್ಮಿಸಲಾಗಿದೆ ಮತ್ತು ಅದರ ಗ್ರಾಹಕರಿಗೆ ಪ್ರೀಮಿಯಂ ಮೊಬಿಲಿಟಿ ಪರಿಹಾರಗಳನ್ನು ನೀಡಲು ನಿರ್ಧರಿಸಲಾಗಿದೆ.
“ಈ ಹೊಸ ಬ್ರಾಂಡ್ ಕಾರಿನ ಸೀಮಿತ ಘಟಕಗಳಿಗೆ ಮೀಸಲಿರಲಿದೆ ಮತ್ತು ವಾಹನದ ಬುಕಿಂಗ್ ಮೇ 26, 2022ರಂದು ಪ್ರಾರಂಭವಾಗುತ್ತದೆ, ಅದರ ನಂತರ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ” ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ʼಕಿಡ್ನಿ ಸ್ಟೋನ್ʼ ಕರಗಿಸಲು ಇಲ್ಲಿದೆ ಮನೆ ಮದ್ದು
ಇದುವರೆಗೆ ತಯಾರಿಸಿದ ಅತ್ಯಂತ ಹೈಟೆಕ್ ಕಿಯಾ, EV6 ನಿಜವಾದ ಗೇಮ್ ಚೇಂಜರ್ ಆಗಿದ್ದು, ವಿದ್ಯುತ್ ಚಲನಶೀಲತೆಯನ್ನು ವಿನೋದ, ಅನುಕೂಲಕರ ಹೀಗೆ ಪ್ರತಿ ಸೂಕ್ಷ್ಮ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. “EV6 ಕಿಯಾ ಇಂಡಿಯಾದ ವಿಶೇಷ ಕೊಡುಗೆಯಾಗಿದೆ ಮತ್ತು 2022ರಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಲಭ್ಯವಿರುತ್ತದೆ. ವಾಹನದೊಂದಿಗೆ, ಕಂಪನಿಯು ಕೇವಲ ಎಲೆಕ್ಟ್ರಾನಿಕ್ ವಾಹನ ಗ್ರಾಹಕರನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ ಪ್ರತಿ ಸಂಭಾವ್ಯ ಪ್ರೀಮಿಯಂ ಕಾರು ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ ಎಂದು ಕಿಯಾ ಹೇಳಿದೆ.