ನವದೆಹಲಿ: ಭಾನುವಾರ ನೇಪಾಳ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 78-40 ಅಂತರದ ಭಾರೀ ಗೆಲುವಿನೊಂದಿಗೆ ಭಾರತೀಯ ಮಹಿಳಾ ತಂಡ ಚೊಚ್ಚಲ ಖೋ ಖೋ ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸ್ಮರಣೀಯ ಪಂದ್ಯದಲ್ಲಿ ಭಾರತ ವೇಗ, ತಂತ್ರ ಮತ್ತು ಕೌಶಲ್ಯದ ಮಾಸ್ಟರ್ ಕ್ಲಾಸ್ ಅನ್ನು ಪ್ರದರ್ಶಿಸಿತು.
ದೆಹಲಿಯಲ್ಲಿ ನಡೆದ ಮೊದಲ ಆವೃತ್ತಿಯ ಖೋಖೋ ವಿಶ್ವಕಪ್ ನಲ್ಲಿ ಭಾರತೀಯ ವನಿತೆಯರ ತಂಡ ಚಾಂಪಿಯನ್ ಪಟ್ಟಕ್ಕೆ ಏರಿದೆ. ಒಂದೂ ಪಂದ್ಯವನ್ನು ಸೋಲದೆ ಭಾರತ ಮಹಿಳಾ ತಂಡ ಫೈನಲ್ ಪ್ರವೇಶಿಸಿತ್ತು. ನೇಪಾಳವನ್ನು 78- 40 ಅಂಕಗಳ ಅಂತರದಿಂದ ಸೋಲಿಸಿದ ಭಾರತ ಮಹಿಳಾ ತಂಡ ಚಾಂಪಿಯನ್ ಆಗಿದೆ.
ಭಾರತದ ಗುಂಪು ಹಂತಗಳಲ್ಲಿ ದಕ್ಷಿಣ ಕೊರಿಯಾ, ಇರಾನ್ ಮತ್ತು ಮಲೇಷ್ಯಾ ವಿರುದ್ಧ ಭರ್ಜರಿ ಗೆಲುವುಗಳು, ನಂತರ ಕ್ವಾರ್ಟರ್-ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಮತ್ತು ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಗೆಲುವು ಸಾಧಿಸಿತ್ತು.