ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಹೊಸ ವಿಮಾ ವ್ಯವಹಾರ ಶಾಖೆಯ ಪ್ರಥಮ ವಿಮಾ ಪ್ರಸ್ತಾವನೆಗಳನ್ನು ಏಪ್ರಿಲ್ 1, 2022 ರಿಂದ ಆನ್ ಲೈನ್ ಮೂಲಕ ಮಾತ್ರ ಸಲ್ಲಿಸಬೇಕಿದೆ.
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಹೊಸ ವಿಮಾ ವ್ಯವಹಾರ ಶಾಖೆಯ ಪ್ರಥಮ ವಿಮಾ ಪ್ರಸ್ತಾವನೆಗಳನ್ನು ಆನ್ ಲೈನ್ ಮೂಲಕ ಸ್ವೀಕರಿಸುವ ಮಾಡ್ಯೂಲ್ ಈಗಾಗಲೇ ಚಾಲ್ತಿಯಲ್ಲಿದ್ದು, ವಿಮಾ ಇಲಾಖೆ ನಿರ್ದೇಶನಾಲಯದ ಸುತ್ತೋಲೆಯಂತೆ ಏಪ್ರಿಲ್ 1 ರ ನಂತರದ ಹೊಸ ಪ್ರಸ್ತಾವನೆಗಳನ್ನು ಕಡ್ಡಾಯವಾಗಿ ಆನ್‌ಲೈನ್ ನಲ್ಲಿಯೇ ಸಲ್ಲಿಸಬೇಕಿದೆ.
ಪ್ರಸ್ತಾವನೆಗಳನ್ನು ಕೆಜಿಐಡಿ ವೆಬ್‌ಸೈಟ್ https:/kgidonline.karnataka.gov.in/LOGIN/INDEX ಮೂಲಕ ಸಲ್ಲಿಸಬಹುದು. ಬಳಕೆದಾರರ ಅನುಕೂಲಕ್ಕಾಗಿ https//kgidonilne.karnataka.gov.in/kgid-umv ನಲ್ಲಿ ವಿಡಿಯೋಗಳನ್ನು ವೀಕ್ಷಿಸಬಹುದು ಎಂದು ಕೊಪ್ಪಳ ಜಿಲ್ಲಾ ವಿಮಾ ಅಧಿಕಾರಿಗಳು ತಿಳಿಸಿದ್ದಾರೆ.