ಕೆಎಫ್ಸಿ ಮಹಿಳೆಯರಿಗೆ ಖುಷಿ ಸುದ್ದಿ ನೀಡಿದೆ. ಕೆಎಫ್ಸಿ ತನ್ನ ರೆಸ್ಟೋರೆಂಟ್ ನಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಘೋಷಣೆ ಮಾಡಿದೆ. ಮುಂದಿನ 3 -4 ವರ್ಷದಲ್ಲಿ ಭಾರತದ ಕೆಎಫ್ಸಿ ರೆಸ್ಟೋರೆಂಟ್ ಗಳಲ್ಲಿ 5000 ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ. ಕೆಎಫ್ಸಿ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೆಎಫ್‌ಸಿ ಕ್ಷಮತಾ ಕಾರ್ಯಕ್ರಮದಡಿ 2024 ರ ವೇಳೆಗೆ ಮಹಿಳಾ ಉದ್ಯೋಗಿಗಳ ಒಟ್ಟು ಪ್ರಮಾಣವನ್ನು ಶೇಕಡಾ 40ರಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಪ್ರಸ್ತುತ ಶೇಕಡಾ 30ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಕೆಎಫ್ಸಿ ದೇಶದಲ್ಲಿ ಎರಡು ಮಹಿಳಾ ರೆಸ್ಟೋರೆಂಟ್ ತೆರೆದಿದೆ. ಡಾರ್ಜಲಿಂಗ್ ನಲ್ಲಿ ಕೆಎಫ್ಸಿ ಮೊದಲ ಆಲ್ – ವುಮೆನ್ ರೆಸ್ಟೋರೆಂಟ್ ತೆರೆದಿದೆ. ಎರಡನೇ ರೆಸ್ಟೋರೆಂಟ್ ಹೈದ್ರಾಬಾದ್ ನಲ್ಲಿ ಶುರುವಾಗಿದೆ.
ವಿಶ್ವದಾದ್ಯಂತ ಆಲ್-ವುಮೆನ್ ರೆಸ್ಟೋರೆಂಟ್ ಸಂಖ್ಯೆ 25 ಸಾವಿರವಿದೆ. ಮಹಿಳೆಯರಿಗೆ ಉದ್ಯೋಗ ನೀಡುವುದು, ಲಿಂಗ ತಾರತಮ್ಯ ಕಡಿಮೆ ಮಾಡುವುದು ಇದ್ರ ಮೂಲ ಉದ್ದೇಶವಾಗಿದೆ.