ಬೆಂಗಳೂರು: ಗೃಹಜ್ಯೋತಿ ಯೋಜನೆ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್ ದರ ಹೆಚ್ಚಳ ಶಾಕ್ ನೀಡಲಾಗಿದೆ. ಜೂನ್ 1 ರಿಂದಲೇ ಅನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ.
ಪ್ರತಿ ಯೂನಿಟ್ ವಿದ್ಯುತ್ ದರ 70 ಪೈಸೆ ಹೆಚ್ಚಳ ಮಾಡಿ KERC ಆದೇಶ ಹೊರಡಿಸಿದೆ. ಮೇ 12ರಂದು KERC ವಿದ್ಯುತ್ ಪರಿಷ್ಕರಣೆ ಮಾಡಿತ್ತು. ವಿದ್ಯುತ್ ಸರಬರಾಜು ಕಂಪನಿಗಳಿಗೆ ನಷ್ಟದ ಕಾರಣ ನೀಡಿ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಪರಿಷ್ಕೃತ ವಿದ್ಯುತ್ ದರ ಜೂ. 1 ರಿಂದಲೇ ಜಾರಿಯದಲ್ಲಿದೆ.
ಈ ಹಿಂದೆ ಏಪ್ರಿಲ್ 1 ರಿಂದ ಹೊಸ ದರ ಅನ್ವಯವಾಗಲಿದೆ ಎಂದು KERC ಹೇಳಿತ್ತು. ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ದರ ಹೆಚ್ಚಳ ಆದೇಶಕ್ಕೆ ತಡೆ ಬಿದ್ದಿತ್ತು. ಈಗ ಜೂನ್ 1 ರಿಂದ ಪರಿಷ್ಕೃತವನ್ನು ಕೆಇಆರ್‌ಸಿ ಜಾರಿ ಮಾಡಿದೆ.