ಚೀನಾ ಸೊಕ್ಕಿನ ವರ್ತನೆ ಮುಂದುವರೆದಿದೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಚೀನಾ ವರ್ತನೆಗೆ ಇದೀಗ ಪುಟ್ಟ ದೇಶ ಸರಿಯಾಗಿ ಬುದ್ದಿ ಕಲಿಸಿದೆ. ತನ್ನಿಂದಲೇ ಎಲ್ಲ ಎನ್ನುತ್ತಿದ್ದ ಚೀನಾಗೆ ಕೀನ್ಯಾ ಸರಿಯಾದ ಉತ್ತರ ನೀಡಿದೆ. ಈ ಮೂಲಕ ಚೀನಾ ಒಬ್ಬಂಟಿಯಾಗುತ್ತಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.
ಕೀನ್ಯಾ ದೇಶದಲ್ಲಿ 3.2 ಬಿಲಿಯನ್ ಡಾಲರ್ ಮೊತ್ತದ ರೈಲು ಯೋಜನೆ ಕೈಗೊಂಡಿತ್ತು ಚೀನಾ. ಪೂರ್ವ ಆಫ್ರಿಕಾದ ಪುಟ್ಟ ರಾಷ್ಟ್ರದಲ್ಲಿ ರೈಲು ಹಳಿ ಹಾಗೂ ರೈಲುಗಳ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಇದೀಗ ಚೀನಾಗೆ ರೈಲು ನಿರ್ಮಾಣದಲ್ಲಿ ದೊಡ್ಡ ಹೊಡೆತ ಬಿದ್ದಿದೆ.
ಚೀನಾ ಕೈಗೊಂಡಿರುವ ರೈಲು ಯೋಜನೆ ಕಾನೂನುಬಾಹಿರ ಎಂದು ಕೀನ್ಯಾ ಘೋಷಿಸಿದೆ. ಈ ಮೂಲಕ ಚೀನಾಗೆ ಹಿನ್ನೆಡೆಯಾಗಿದೆ.
ಹೌದು, ಚೀನಾದ CRBC ಯೋಜನೆ ಸರಿಯಿಲ್ಲ ಎಂದು ಈ ಯೋಜನೆಯನ್ನು ಪ್ರಶ್ನಿಸಿ 2014ರಲ್ಲೇ ಸಾಮಾಜಿಕ ಹೋರಾಟಗಾರ ಓಕಿಯಾ ಒಮ್ಟಾಹಾ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ವಿಚಾರಣೆ ಇತ್ತೀಚೆಗೆ ಪೂರ್ಣಗೊಂಡಿದ್ದು, ಚೀನಾ ವಿರುದ್ಧ ತೀರ್ಪು ನೀಡಿದೆ. 2017ರಲ್ಲೇ ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈಗಾಗಲೇ ದೇಶದ ಹಲವು ಭಾಗಗಳಲ್ಲಿ ರೈಲು ಸಂಚಾರ ಆರಂಭವಾಗಿದೆ. ಹೀಗಿರುವಾಗ ಈ ಯೋಜನೆಯನ್ನು ಕಾನೂನುಬಾಹಿರ ಎಂದು ನ್ಯಾಯಾಲಯ ಘೋಷಿಸಿದೆ.